ಮೈಸೂರು

ನೂತನ ವರ್ಷಕ್ಕೆ ಸಂಭ್ರಮದ ಸ್ವಾಗತ

%e0%b3%86%e0%b2%ae2016ಕ್ಕೆ ವಿದಾಯ ಹೇಳಿ 2017ನ್ನು ಮೈಸೂರಿನ ಜನತೆ ಅದ್ಧೂರಿಯಾಗಿ ಸ್ವಾಗತಿಸಿತು. ಸಾಂಸ್ಕೃತಿಕ ನಗರಿಯಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡೆಳಿ ವತಿಯಿಂದ ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯ ದೇವಸ್ಥಾನದ ಬಳಿ ಸುಗಮ ಸಂಗೀತವನ್ನು ಏರ್ಪಡಿಸಲಾಗಿತ್ತು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಜೆಯಾಗುತ್ತಿದ್ದಂತೆ ಕೊರೆಯುವ ಚಳಿಯಿದ್ದರೂ ಹೊಸ ವರ್ಷದ ಸ್ವಾಗತಕ್ಕೆ ಜನತೆ ಭರ್ಜರಿ ಸಿದ್ಧತೆ ನಡೆಸಿದ್ದರು. ಅದರಂತೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ ಅವರ ಸುಶ್ರಾವ್ಯ ಕಂಠದಿಂದ ಕೆ.ಎಸ್. ನರಸಿಂಹಸ್ವಾಮಿ, ಜಿ.ಎಸ್. ಶಿವರುದ್ರಪ್ಪ ಮುಂತಾದವರ ಸಾಹಿತ್ಯದಿಂದೊಡಗೂಡಿದ ಗೀತೆಗಳು ಸುಧೆಯಾಗಿ ಹರಿದು ಪ್ರೇಕ್ಷಕರನ್ನು ಸಂಗೀತದಲೆಯಲ್ಲಿ ತೋಯಿಸಿತು.

ಅರಮನೆಯು ಬೆಳಕಿನಿಂದ ಕಂಗೊಳಿಸಿತು. ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರಗಳು ಮೂಡಿದವು. ಖಾಸಗಿ ಹೋಟೆಲ್ ಗಳಲ್ಲಿಯೂ ನೂತನ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗಿದ್ದು, ಬೆಡಗಿಯರಿಂದ ಕ್ಯಾಟ್ ವಾಕ್ ಆಯೋಜಿಸಲಾಗಿತ್ತು.

ಒಟ್ಟಿನಲ್ಲಿ ನೂತನ ವರ್ಷವನ್ನು ಅರಮನೆ ನಗರಿ ಮೈಸೂರು ಅತ್ಯಂತ ಸಡಗರ ಸಂಭ್ರಮದಿಂದ ಬರಮಾಡಿಕೊಂಡಿದೆ.

Leave a Reply

comments

Related Articles

error: