ಮೈಸೂರು

ಅನ್ನಪೂರ್ಣ ಆಸ್ಪತ್ರೆಯ ಉಚಿತ ಕಣ್ಣು ತಪಾಸಣೆ ಮೊಬೈಲ್ ವ್ಯಾನ್‍ಗೆ ಚಾಲನೆ

ಮೈಸೂರಿನ ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯಿಂದ ಮೊಟ್ಟಮೊದಲ ಬಾರಿಗೆ ಕಣ್ಣು ತಪಾಸಣೆ ಮೊಬೈಲ್ ವ್ಯಾನ್ ನಗರದಾದ್ಯಂತ ಸಂಚರಿಸಿ ಉಚಿತ ಸೇವೆ ನೀಡಲಿದೆ.

ಜ.2 ರಿಂದ 19 ರ ವರೆಗೆ ನಗರದ ಹಲವಾರು ಕಡೆ ಕಣ್ಣಿನ ತಪಾಸಣಾ ಮೊಬೈಲ್ ವ್ಯಾನ್ ಸಂಚರಿಸಲಿದೆ.  ಡಿ.31ರಂದು ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿಯವರು ವ್ಯಾನ್‍ಗೆ ಚಾಲನೆ ನೀಡಿದರು.

ವಾಹನ ಸಂಚಾರದ ವಿವರ :

ಜ.2- ಕುವೆಂಪುನಗರ ಕಾಂಪ್ಲೆಕ್ಸ್, ಜ.3-ಸರಸ್ವತಿಪುರಂ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಹತ್ತಿರ, ಜ.4 ವಿದ್ಯಾರಣ್ಯಪುರಂನ ಸ್ಟರ್ಲಿಂಗ್ ಥಿಯೇಟರ್ ಹತ್ತಿರ, ಜ.5ರಂದು ಒಂಟಿಕೊಪ್ಪಲಿನ ರಾಯಲ್ ವರ್ಲ್ಡ್ ವೃತ್ತ, ಜ.6. ಆಂದೋಲನ ವೃತ್ತ ಮೂಡ ವೃತ್ತ, ಜ.7. ವಿಜಯನಗರದ ರಿಲೆಯನ್ಸ್ ಫ್ರೇಷ್‍, ಜ.9, ಹಿನಕಲ್ ಬಸ್ ನಿಲ್ದಾಣ, ಜ.10 ಕುವೆಂಪುನಗರದ ಎ.ಟು ಝಡ್ ಹತ್ತಿರ, ಜ.11 ರಂದು ಜನತಾನಗರ ಬಸ್ ನಿಲ್ದಾಣ, ಜ.12, ವಿವೇಕಾನಂದ ಸರ್ಕಲ್, ಜ.13 ಟಿ.ಕೆ.ಲೇಔಟ್ ಮಾರುತಿ ದೇವಸ್ಥಾನದ ಹತ್ತಿರ, ಜ.16 ಕಾಮಾಕ್ಷಿ ಆಸ್ಪತ್ರೆ ಹತ್ತಿರ, ಜ.17 ಬಿ.ಎಂ. ಹ್ಯಾಬಿಟೇಟ್ ಮಾಲ್ ಹತ್ತಿರ, ಜ.18 ಹೂಟಗಳ್ಳಿ ಡಾ. ದಿನೇಶ್ ಶೆಟ್ಟಿ ಕ್ಲಿನಿಕ್ ಹತ್ತಿರ, ಹಾಗೂ ಜ.19ರಂದು ಬಿಗ್‍ ಬಜಾರ್‍ನಲ್ಲಿ ತಪಾಸಣೆಯ ವಾಹನವು ಸಂಚರಿ ಸೇವೆ ಒದಗಿಸಲಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಆಸ್ಪತ್ರೆ ಆಡಳಿತ ಮಂಡಳಿ ಕೋರಿದೆ.

Leave a Reply

comments

Related Articles

error: