ಮೈಸೂರು

ಕಾರಿನ ಮೇಲೆ ಬಿದ್ದ ವಿದ್ಯುತ್ ತಂತಿ : ನೋಡನೋಡುತ್ತಲೇ ಕಾರು ಭಸ್ಮ

ಮೈಸೂರು,ನ.5:- ಕಾರಿನ ಮೇಲೆ ವಿದ್ಯುತ್ ತಂತಿಯೊಂದು ತುಂಡರಿಸಿ ಬಿದ್ದ ಪರಿಣಾಮ ನೋಡನೋಡುತ್ತಿದ್ದಂತೆ ಮನೆ ಮುಂದೆ ನಿಲ್ಲಿಸಿದ್ದ ಕಾರು ಸಂಪೂರ್ಣ ಭಸ್ಮವಾದ ಘಟನೆ ಇಂದು ಬೆಳಿಗ್ಗೆ ಮೈಸೂರಿನ ಶ್ರೀರಾಂಪುರ ಮುನಿನಾರಾಯಣಪ್ಪ ಬಡಾವಣೆಯಲ್ಲಿ ನಡೆದಿದೆ.

ಮೈಸೂರಿನ ಶ್ರೀರಾಂಪುರ ಮುನಿನಾರಾಯಣಪ್ಪ ಬಡಾವಣೆ ನಿವಾಸಿ ವಿನೋದ್ ಎಂಬವರಿಗೆ ಸೇರಿದ ಟೊಯೋಟಾ ಇಟಿಎಸ್ ಕಾರು ಇದಾಗಿದ್ದು, ಮನೆಯ ಮುಂದೆ ನಿಲ್ಲಿಸಿದ್ದರು. ವಿದ್ಯುತ್ ತಂತಿಯೊಂದು ತುಂಡರಿಸಿ ಬಿದ್ದ ಪರಿಣಾಮ ಈ ಅನಾಹುತ ಸಂಭವಿಸಿದೆ. ನೋಡ ನೋಡುತ್ತಲೇ ಮಾಲೀಕನ ಕಣ್ಣೆದುರೇ ಕಾರು ಸುಟ್ಟು  ಭಸ್ಮವಾಗಿದೆ. ಅಗ್ಮಿಶಾಮಕ ಸಿಬ್ಬಂದಿಗಳು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಕಾರಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: