
ಪ್ರಮುಖ ಸುದ್ದಿ
ಬೇಕರಿಯೊಂದರ ಮೇಲ್ಛಾವಣಿ ತೆಗೆದು ಒಳನುಗ್ಗಿ ಕಳ್ಳತನ
ರಾಜ್ಯ(ಮಂಡ್ಯ)ನ.5:- ಬೇಕರಿಯೊಂದರ ಮೇಲ್ಛಾವಣಿ ತೆಗೆದು ಒಳನುಗ್ಗಿದ ಕಳ್ಳರು ನಗದು ಮತ್ತು ಜ್ಯೂಸ್ ಬಾಕ್ಸ್ ಕಳ್ಳತನ ಮಾಡಿದ ಘಟನೆ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿಯ ಪಟ್ಟಣದಲ್ಲಿ ನಡೆದಿದೆ.
ಕಿಕ್ಕೇರಿ ಪಟ್ಟಣದ ಶ್ರೀ ಸಾಯಿ ಕೇಕ್ ಪ್ಯಾಲೇಸ್ ಬೇಕರಿಯಲ್ಲಿ ಕಳ್ಳತನ ನಡೆದಿದ್ದು, ಸುಮಾರು 20 ಸಾವಿರ ರೂ. ನಗದು ಮತ್ತು 1 ಬಾಕ್ಸ್ ರೆಡ್ ಬುಲ್ ಮತ್ತಿತ್ತರ ಜ್ಯೂಸ್ ಬಾಕ್ಸ್ ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಕಿಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)