ದೇಶಪ್ರಮುಖ ಸುದ್ದಿ

ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನೆ: ಬಿಎಸ್‍ಎಫ್‍ ಯೋಧನ ಬಂಧನ

ಫಿರೋಜ್‌ಪುರ್‌ (ನ.5): ಪಾಕಿಸ್ಥಾನದ ಐಎಸ್‍ಐ ಏಜೆಂಟರಿಗೆ ದೇಶದ ಭದ್ರತೆಗೆ ಸಂಬಂಧಿಸಿದ ರಹಸ್ಯ ಮಾಹಿತಿ ರವಾನೆ ಮಾಡಿದ ಆರೋಪದ ಮೇಲೆ ಗಡಿಭದ್ರತಾ ಪಡೆ – ಬಿಎಸ್‌ಎಫ್ ಯೋಧರೊಬ್ಬರನ್ನು ಭಾನುವಾರ ಬಂಧಿಸಲಾಗಿದೆ.

ಆರೋಪಿ ಶೇಖ್‌ ರಿಯಾಜುದ್ದೀನ್‌, ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ರೇನ್‌ಪುರ ಗ್ರಾಮದವರಾಗಿದ್ದು, ಅವರು ಪಂಜಾಬ್‌ನ ಫಿರೋಜ್‌ಪುರ ವಲಯದ ಬಿಎಸ್‌ಎಫ್‍ 29ನೇ ಬೆಟಾಲಿಯನ್‌ನಲ್ಲಿ ನಿಯೋಜನೆಗೊಂಡಿದ್ದರು.

ರಿಯಾಜುದ್ದೀನ್‌ 2017ರಿಂದಲೂ ಪಾಕ್‌ ಏಜೆಂಟ್‌ ಮಿರ್ಜಾ ಫೈಸಲ್‌ನಿಗೆ ಭಾರತದ ಗಡಿ ರಸ್ತೆಗಳು, ಗಡಿ ಬೇಲಿಗಳು, ಬಿಎಸ್‌ಎಫ್‍ ಹಿರಿಯ ಅಧಿಕಾರಿಗಳ ದೂರವಾಣಿ ಸಂಖ್ಯೆ ಸಹಿತ ಹಲವು ರಹಸ್ಯ ಮಾಹಿತಿಗಳನ್ನು ಕಳುಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: