ಮೈಸೂರು

ಮಹರ್ಷಿ ವಾಲ್ಮೀಕಿ, ನಾಯಕ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಬೈಯ್ದಿರುವ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ನ.5:- ಶ್ರೀಮಹರ್ಷಿ ವಾಲ್ಮೀಕಿ ಹಾಗೂ ನಾಯಕ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಬೈಯ್ದಿರುವ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ, ಗಡಿಪಾರುಮಾಡುವಂತೆ ಆಗ್ರಹಿಸಿ ಮೈಸೂರು ಜಿಲ್ಲಾ ನಾಯಕರ ಯುವಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ದೇಶ ಪವಿತ್ರ ಗ್ರಂಥವಾದ ಶ್ರೀರಾಮಾಯಣ ಕೃತಿಯ ಕರ್ತೃಗಳಾದ ಶ್ರೀಮಹರ್ಷಿ ವಾಲ್ಮೀಕಿಯವರ ಬಗ್ಗೆ ಹಾಗೂ ನಾಯಕ ಜನಾಂಗದ ಬಗ್ಗೆ ದನಗಾಯಿ ಯುವಕರು ಬೈಯ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವುದು ಖಂಡನಾರ್ಹ. ಸಾಮಾಜಿಕ ಜಾಲತಾಣಕ್ಕೆ ಬಿಡುಗಡೆ ಮಾಡಿರುವ ಎಲ್ಲರ ವಿರುದ್ಧ ಎಸ್ ಸಿ , ಎಸ್ ಟಿ ದೌರ್ಜನ್ಯ ಕಾಯಿದೆ ದೂರು ದಾಖಲಿಸಿ ಶೀಘ್ರ ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡುವ ಮೂಲಕ ನಾಯಕ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ, ಸಂಘದ ಅಧ್ಯಕ್ಷ, ವಕೀಲ ಪಡುವಾರಹಳ್ಳಿ ಎಂ.ರಾಮಕೃಷ್ಣ, ರಾಜು ಮಾರ್ಕೆಟ್, ಎಂ.ಶಿವಪ್ರಕಾಶ್, ಎಂ.ಮಹೇಶ್, ಟೆನ್ನಿಸ್ ಗೋಪಿ, ಪುರುಷೋತ್ತಮ, ಅಜಯ್, ಉದ್ಭೂರು ಸೋಮಣ್ಣ, ನಾರಾಯಣ, ಕೃಷ್ಣ, ಶಶಿಕಲ, ಚಂದ್ರಶೇಖರ, ಎಸ್.ಪ್ರತಾಪ್, ರಮ್ಮನಹಳ್ಳಿ ಶಿವಣ್ಣ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: