ದೇಶ

ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲ್ಲ: ಶಶಿ ತರೂರ್

ನವದೆಹಲಿ,ನ.5-ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ ಪಕ್ಷ ನಿಶ್ಚಿತವಾಗಿಯೂ ಇತರ ಪಕ್ಷಗಳೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಳ್ಳಲಿದೆ. ಆದರೆ ಪ್ರಧಾನಿ ಹುದ್ದೆ ಅಭ್ಯರ್ಥಿಯನ್ನು ಎಲ್ಲ ಪಕ್ಷಗಳು ಒಗ್ಗೂಡಿ ತೀರ್ಮಾನಿಸಲಿವೆ ಎಂದು ಕೇರಳದ ಸಂಸದರಾಗಿರುವ ತರೂರ್‌ ಹೇಳಿದರು.

ಕಾಂಗ್ರೆಸ್‌ ನಾಯಕತ್ವದ ಪರಿಕಲ್ಪನೆಯು ವಿಶಾಲ ತಳಹದಿಯನ್ನು ಹೊಂದಿರುತ್ತದೆ. ಹಾಗಾಗಿ ಪ್ರಧಾನಿ ಅಭ್ಯರ್ಥಿ ಯಾರೆಂಬುದನ್ನು ಕಾಂಗ್ರೆಸ್‌ ತನ್ನ ಎಲ್ಲ ಮಿತ್ರ ಪಕ್ಷಗಳೊಂದಿಗೆ ಸಮಾಲೋಚಿಸಿ, ಒಮ್ಮತದಿಂದ, ತೀರ್ಮಾನಿಸಲಿದೆ ಎಂದು ತರೂರ್‌ ಹೆಳಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಪ್ರತಿಭಾವಂತ, ಭರವಸೆಯ ಮತ್ತು ಜನಮನ ಗೆಲ್ಲುವ ನಾಯಕರ ಕೊರತೆಯೇನೂ ಇಲ್ಲ. ಪ್ರಣವ್‌ ಮುಖರ್ಜಿ, ಪಿ.ಚಿದಂಬರಂ ಮೊದಲಾದ ನಾಯಕರು ಪಕ್ಷದ ಹೊಣೆ ಹೊರಲು ಸಿದ್ಧರಾಗಿದ್ದಾರೆ. ಆದರೆ ಕಾಂಗ್ರೆಸ್‌ಗೆ ಸಮಷ್ಟೀ ನಾಯಕತ್ವದಲ್ಲಿ ನಂಬಿಕೆ ಇದೆಯೇ ಹೊರತು ಏಕ ವ್ಯಕ್ತಿ ಕೇಂದ್ರಿಕೃತವಾದ ನಾಯಕತ್ವದಲ್ಲಿ ಅಲ್ಲ ಎಂದು ತರೂರ್‌ ಕಾಂಗ್ರೆಸ್‌ ದೃಷ್ಟಿಕೋನವನ್ನು ಸ್ಪಷ್ಟಪಡಿಸಿದರು. (ಎಂ.ಎನ್)

Leave a Reply

comments

Related Articles

error: