ಕ್ರೀಡೆ

ವಿರಾಟ್ ಕೊಹ್ಲಿಗೆ 30ನೇ ಹುಟ್ಟುಹಬ್ಬದ ಸಂಭ್ರಮ: ಶುಭಾಶಯ ಮಹಾಪೂರ

ನವದೆಹಲಿ,ನ.5-ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಇಂದು 30ನೇ ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕೊಹ್ಲಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಪತ್ನಿ ಅನುಷ್ಕಾ ಶರ್ಮಾ ತಮ್ಮ ಪತಿಯೊಂದಿಗಿರುವ ಫೋಟೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ಅವರ ಜನ್ಮಕ್ಕಾಗಿ ದೇವರಿಗೆ ಧನ್ಯವಾದಗಳು ಎಂದು ಟ್ವಿಟ್ ಮಾಡಿದ್ದಾರೆ.

ಟ್ವೆಂಟಿ-20, ಟೆಸ್ಟ್‌, ಏಕದಿನ ಸಹಿತ ಎಲ್ಲ ವರ್ಗದ ಕ್ರಿಕೆಟ್‌ನಲ್ಲಿ ಒಂದೊಂದೆ ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಳ್ಳುತ್ತಿರುವ ವಿರಾಟ್ ಬ್ಯಾಟಿಂಗ್ ಪ್ರದರ್ಶನ ಹೀಗೆಯೇ ಮುಂದುವರಿಯಲಿ, ಕ್ರಿಕೆಟ್‌ನ ಎಲ್ಲ ಬ್ಯಾಟಿಂಗ್ ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಳ್ಳಲಿ ಮತ್ತು ಭಾರತದ ಕ್ರಿಕೆಟ್ ಖ್ಯಾತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಿರಿಯ ಕ್ರಿಕೆಟಿಗರು, ಅಭಿಮಾನಿಗಳು ಕೊಹ್ಲಿಗೆ ಶುಭ ಹಾರೈಸಿದ್ದಾರೆ.

ಬಿಸಿಸಿಐ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಮಾಜಿ ಕ್ರಿಕೆಟಿಗರಾದ ವಿನೋದ್ ಕಾಂಬ್ಳಿ, ವಿರೇಂದ್ರ ಸೆಹ್ವಾಗ್,  ಹರ್ಭಜನ್ ಸಿಂಗ್, ಇಶಾಂತ್ ಶರ್ಮಾ, ಸುರೇಶ್ ರೈನಾ, ಮೊಹಮ್ಮದ್ ಕೈಫ್ ಸೇರಿದಂತೆ ಬಾಲಿವುಡ್ ತಾರೆಯರು ಶುಭಾಶಯ ತಿಳಿಸಿದ್ದಾರೆ.

ಕೊಹ್ಲಿ ತಮ್ಮ ಹುಟ್ಟುಹಬ್ಬವನ್ನು ಉತ್ತರಾಖಂಡದ ಹರಿದ್ವಾರದಲ್ಲಿ ಆಚರಿಸಿದ್ದಾರೆ. ಶನಿವಾರವೇ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ, ಡೆಹರಾಡುನ್‌ ತಲುಪಿದ್ದರು.

ಹರಿದ್ವಾರದ ಅನಂತ್‌ಧಾಮ್‌ ಆಶ್ರಮಕ್ಕೆ ಕೊಹ್ಲಿ ದಂಪತಿ ಇಂದು ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಇಲ್ಲಿನ ಅನಂತ್‌ ಬಾಬಾ, ಅನುಷ್ಕಾ ಕುಟುಂಬದ ಆಧ್ಯಾತ್ಮಿಕ ಗುರು ಆಗಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ, ನ.7ರವರೆಗೂ ಡೆಹರಾಡುನ್‌ನಲ್ಲೇ ಉಳಿಯಲಿದ್ದು, ಅವರಿಗೆ ವಿಶೇಷ ಭದ್ರತೆ ನೀಡಲಾಗುತ್ತಿದೆ. ಸದ್ಯ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿಯ ಪಡೆದಿರುವ ಕೊಹ್ಲಿ, ಪತ್ನಿ ಅನುಷ್ಕಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. (ಎಂ.ಎನ್)

 

Leave a Reply

comments

Related Articles

error: