ಮೈಸೂರು

ಗಾಂಧೀಜಿ ಮತ್ತು ಜಾಗತೀಕರಣ ವಿಶೇಷ ಉಪನ್ಯಾಸ; ಜ.2ರಂದು

ಮೈಸೂರು ವಿಶ್ವವಿದ್ಯಾನಿಲಯ, ಗಾಂಧಿ ಅಧ್ಯಯನ ಕೇಂದ್ರ ಮತ್ತು ಕನ್ನಡ ವಿಕಾಸ ವಿದ್ಯಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ‘ಗಾಂಧೀಜಿ ಮತ್ತು ಜಾಗತೀಕರಣ’ ವಿಷಯ ಕುರಿತು ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜ.2ರ ಬೆಳಿಗ್ಗೆ 10:30ಕ್ಕೆ ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆಯಲ್ಲಿ ಕಾರ್ಯಕ್ರಮವನ್ನು ಡಾ.ಗಂಗೂಬಾಯಿಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಕುಲಪತಿ ಪ್ರೊ.ಸರ್ವಮಂಗಳಾ ಶಂಕರ್ ಉದ್ಘಾಟಿಸುವರು. ಪ್ರಗತಿಪರ ಚಿಂತಕ ಪ್ರೊ.ಷಬೀರ್ ಮುಸ್ತಫ್ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಮಹಾಪೌರ ಎಂ.ಜೆ. ರವಿಕುಮಾರ್ ಭಾಗವಹಿಸುವರು. ಶಾಲೆಯ ಮುಖ್ಯ ಗುರುಗಳಾದ ಪ. ಮಲ್ಲೇಶ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ನಗರ ಮಟ್ಟದ ಅಂತರ ಪ್ರೌಢಶಾಲಾ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: