ಸುದ್ದಿ ಸಂಕ್ಷಿಪ್ತ

ಕಾರ್ತಿಕಮಾಸ : ಸುತ್ತೂರಿನಲ್ಲಿ ವಿಶೇಷ ಪೂಜೆ

ಮೈಸೂರು,ನ.5 : ಸುತ್ತೂರಿನ ಶ್ರೀಶಿವರಾತ್ರೀಶ್ವರ ಶಿವಯೋಗಿಗಳವರ ಕರ್ತೃಗದ್ದುಗೆ, ಸೋಮೇಶ್ವರ, ವೀರಭದ್ರೇಶ್ವರ ಮತ್ತು ಮಹದೇಶ್ವರ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ.

ನ.8 ರಿಂದ ಡಿ7ರವರೆಗೆ ಪ್ರತಿ ದಿನ ಪ್ರಾತಃ ಕಾಲದಲ್ಲಿ ಮಹಾರುದ್ರಾಭಿಷೇಕ, ಸಹಸ್ರನಾಮ, ಅಷ್ಟೋತ್ತರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿಯನ್ನು ಏರ್ಪಡಿಸಲಾಗಿದ್ದು, ಪ್ರತಿ ಸೋಮವಾರ ಸಂಜೆ ದೀಪೋತ್ಸವ ನಡೆಯುವುದು.

ಸೇವಾರ್ಥ ಸಲ್ಲಿಸಲು ಅಪೇಕ್ಷಿಸುವ ಭಕ್ತಾದಿಗಳು ಸುತ್ತೂರಿನಲ್ಲಿ ಅಥವಾ ಜೆಎಸ್ಎಸ್ ವಿದ್ಯಾಪೀಠದ ಕಾರ್ಯಾಲಯದಲ್ಲಿ ನೇರವಾಗಿ ಅಥವಾ ದೂ. ಸಂ 0821 232223, 2548212 ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: