ಸುದ್ದಿ ಸಂಕ್ಷಿಪ್ತ

ನಾಳೆಯಿಂದ ತಿರುಪತಿಗೆ ಪಾದಯಾತ್ರೆ

ಮೈಸೂರು, ನ.5 : ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸಿ.ಮಂಜುನಾಥ್ ಅವರು ಮೈಸೂರು ತಿರುಪತಿ ತಿರುಮಲಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದು, ನ.6ರ ಬೆಳಗ್ಗೆ 10 ಗಂಟೆಗೆ ನಗರದ ಕೋಟೆ ಆಂಜನೇಯ ದೇವಸ್ಥಾನದಿಂದ ಆರಂಭಿಸಲಿದ್ದಾರೆ.

ಸತತ 25 ವರ್ಷಗಳಿಂದ ಈ ಯಾತ್ರೆ ಮಾಡುತ್ತಿದ್ದು, ಸುಮಾರು 12 ದಿನಗಳ ಕಾಲ್ನಡಿಗೆ ಯಾತ್ರೆಯಾಗಿದ್ದು, ಇವರೊಂದಿಗೆ ಪತ್ನಿ ರತ್ನ ಅವರು ಇರಲಿದ್ದಾರೆ, ಕೊಡಗು, ಕೇರಳ ನೆರೆ ಸಂತ್ರಸ್ಥರ ಬದುಕು ಹಸನಾಗಲೆಂದು ಪ್ರಸಕ್ತ ಸಾಲಿನ ಯಾತ್ರೆ ಸಂಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಮ್.ಆರ್)

Leave a Reply

comments

Related Articles

error: