ಮೈಸೂರು

ಅಂಗಡಿಯೊಂದರ ರೋಲಿಂಗ್ ಶೆಟರ್ ಮುರಿದು ಕಳ್ಳತನ

ಮೈಸೂರು,ನ.6:- ಅಂಗಡಿಯೊಂದರ ರೋಲಿಂಗ್ ಶೆಟರ್ ಮುರಿದು ಒಳನುಗ್ಗಿದ ಕಳ್ಳರು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕದ್ದೊಯ್ದ ಘಟನೆ ಸಿದ್ದಲಿಂಗೇಶ್ವರ ಬಡಾವಣೆಯಲ್ಲಿ ನಡೆದಿದೆ.

ಕೃಷ್ಣ ಎಂಬವರು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ. ನ3ರಂದು ತಮ್ಮ ವ್ಯಾಪಾರ ಮುಗಿಸಿ ಸಂಜೆ 6 ಗಂಟೆಗೆ ಬೀಗ ಹಾಕಿಕೊಂಡು ಹೋಗಿದ್ದೆ. ನಂತರ ನ.4 ರಂದು ಬೆಳಿಗ್ಗೆ ಬಂದು ನೋಡಿದಾಗ ಅಂಗಡಿಯ ರೋಲಿಂಗ್ ಶೆಟರ್ ಮೀಟಿ ಒಳಗಿದ್ದ ಮುಳ್ಳುತಂತಿ, ಬೈಂಡಿಂಗ್ ವೈರ್ ಹಾಗೂ ಸೋನಿ ಕಂಪೆನಿಯ ಎಲ್ ಇ ಡಿ ಟಿವಿ, ಸಿ ಸಿ ಕ್ಯಾಮೆರಾದ ಡಿವಿಆರ್ ಮತ್ತು ಯುಪಿಎಸ್ 02 ಬ್ಯಾಟರಿ,01 ಮೊಬೈಲ್  ಮತ್ತು 35 ಡೀಸಲ್ ಕ್ಯಾನ್ ಹಾಗೂ 4000 ರೂ. ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: