ಸುದ್ದಿ ಸಂಕ್ಷಿಪ್ತ

ಡಿಎಸ್ಎಸ್ ಗೆ ನೂತನ ಪದಾಧಿಕಾರಿಗಳ ಆಯ್ಕೆ

ಮೈಸೂರು,ನ.6 : ಹುಣಸೂರು ತಾಲ್ಲೂಕಿನ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕರಾಗಿ ಡೇವಿಡ್ ರತ್ನಪುರಿ ಆಯ್ಕೆಯಾಗಿದ್ದಾರೆ.

ಈಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸಮಿತಿ ಸಂಘಟನಾ ಸಂಚಾಲಕರನ್ನಾಗಿ ಶಿವರಾಜ್ ಮುತ್ತುರಾಯನ ಹೊಸಹಳ್ಳಿ, ಮಹದೇವ ಬೀರನಹಳ್ಳಿ, ಆಶೋಕ್ ಕೆ.ಎಂ ವಾಡಿ, ಜಯಣ್ಣ, ಶಾಂತಕುಮಾರ್, ಕಾರ್ಯಕಾರಿಗೆ ಗಣೇಶ ಬೀರನಹಲ್ಳಿ, ಮಹದೇವ ಬೀಜಗನಹಳ್ಳಿ, ನಾಗರಾಜು ಇಂಡುವಾಳು, ಶ್ರೀಧರ್ ಕೆ.ಎಂ.ವಾಡಿ ಇವರನ್ನು ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: