ದೇಶಪ್ರಮುಖ ಸುದ್ದಿ

ಸೇನೆಗೆ ಬಿಪಿನ್ ರಾವತ್, ವಾಯುಸೇನೆಗೆ ಬೀರೇಂದರ್ ಸಿಂಗ್ ಧನೋವಾ ಮುಖ್ಯಸ್ಥರು

ಭಾರತೀಯ ಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಾಯುಪಡೆ ಮುಖ್ಯಸ್ಥರಾಗಿ ಬೀರೇಂದರ್ ಸಿಂಗ್ ಧನೋವಾ ಕೂಡ ಅಧಿಕಾರ ಸ್ವೀಕರಿಸಿದರು.

ಬಿಪಿನ್ ಅವರು ಸೇನೆಗೆ 27ನೇ ಮುಖ್ಯಸ್ಥರಾದರೆ, ಧನೋವಾ ಅವರು ವಾಯುಪಡೆಯ 25ನೇ ಮುಖ್ಯಸ್ಥರಾಗಿದ್ದಾರೆ.

ವಿವಾದಗಳಿಗೆ ಬಕ್ಷಿ ತೆರೆ

ಸೇನೆಗೆ ನೂತನ ಮುಖ್ಯಸ್ಥರನ್ನು ಆಯ್ಕೆ ಮಾಡುವ ವೇಳೆ ಪೂರ್ವ ವಲಯದ ಲೆಫ್ಟಿನೆಂಟ್ ಜನರಲ್ ಪ್ರವೀಣ್ ಬಕ್ಷಿ ಅವರ ಸೇವಾ ಹಿರಿತನವನ್ನು ಕಡೆಗಣಿಸಲಾಗಿದೆ. ಹೀಗಾಗಿ ಅವರು ರಜೆಯ ಮೇಲೆ ತೆರಳಿದ್ದಾರೆ. ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಆದರೆ ಸ್ವತಃ ಬಕ್ಷಿ ಅವರೇ ಈ ವಿಷಯವನ್ನು ನಿರಾಕರಿಸಿದ್ದು, ರಾಜೀನಾಮೆ ನೀಡುವ ಯಾವುದೇ ಯೋಚನೆ ನನ್ನಲ್ಲಿಲ್ಲ. ದೇಶಕ್ಕಾಗಿ ನಾವೆಲ್ಲರೂ ಒಟ್ಟಾಗಿ ದುಡಿಯಬೇಕಾಗಿದೆ. ಮಾಧ್ಯಮಗಳು ಈರೀತಿಯ ವರದಿಯನ್ನು ಪ್ರಕಟಿಸಬಾರದು ಎಂದು ಮನವಿ ಮಾಡಿದ್ದು, ವಿವಾದಗಳಿಗೆ ತೆರೆ ಎಳೆದಿದ್ದಾರೆ.

Leave a Reply

comments

Related Articles

error: