ಮೈಸೂರು

ಇಷ್ಟ ರಂಗೋಲಿ ವೈಭವ ;ರಂಗೋಲಿ ಚಿತ್ತಾರ

ಮನ್ವಂತರ ಸಮೂಹ ಬಳಗದ ವತಿಯಿಂದ ಭಾನುವಾರ ಹೊಸ ವರ್ಷದ ಪ್ರಯುಕ್ತ ಭಗಿನಿ ಸೇವಾ ಸಮಾಜ ಆವರಣದಲ್ಲಿ ಉಷಾ ಕೆ.ಆರ್.ಶ್ರೀ ಹರಿ ಅವರ ನೆನಪಿನಲ್ಲಿ ‘ಇಷ್ಟ ರಂಗೋಲಿ ವೈಭವ’ ರಂಗೋಲಿ ಚಿತ್ತಾರ ಮತ್ತು ಎಳ್ಳು ಬೆಲ್ಲ ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಿಕಾ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಎಚ್.ಕೆ.ಗುಂಡು ವೆಂಕಟೇಶಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹೊಸ ವರ್ಷದಲ್ಲಿ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು. ಎಷ್ಟೇ ಕಷ್ಟಗಳು ಬಂದರೂ ಎದೆಗುಂದದೆ ಮುನ್ನಡೆಯಬೇಕು. ಅಂತೆಯೇ ಸಿಹಿ ಕ್ಷಣಗಳನ್ನು ಮರೆಯದೆ ಜೀವನದಲ್ಲಿ ಮುಂದೆ ಸಾಗಬೇಕು ಎಂದು ಹೇಳಿದರು.

ಹೊಸ ವರ್ಷದ ಪ್ರಯುಕ್ತ ಎಲ್ಲರಿಗೂ ಸಿಹಿ ಹಂಚಿ ಸಂತಸ ಹಂಚಿಕೊಂಡರು. ನಂತರ 2017 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಇಷ್ಟರಂಗೋಲಿ ವೈಭವ ಸ್ಪರ್ಧೆಯಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಆಶಾ ಕಿರಣ ಹಾಸ್ಪಿಟಲ್ ನ ಡಾಕ್ಟರ್ ಲಯನ್ ಗುರುರಾಜ್ ಕಾರ್ಯಕ್ರಮದ ಅಧ‍್ಯಕ್ಷತೆಯನ್ನು ವಹಿಸಿದ್ದರು. ಮನ್ವಂತರ ಬಳಗದ ಅಧ್ಯಕ್ಷರಾದ ವೆಂಕಟರಾಮ್ ಕಶ್ಯಪ್, ಖಜಾಂಚಿ ಶ್ರೀಹರಿ, ಮಾಜಿ ನಗರ ಪಾಲಿಕೆ ಅಧ‍್ಯಕ್ಷೆ ಹಾಗೂ ಮಹಿಳಾ ಅಧ‍್ಯಕ್ಷೆ ಚಿಕ್ಕಮ್ಮ ಬಸವರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: