ದೇಶಪ್ರಮುಖ ಸುದ್ದಿ

ದೆಹಲಿ ಮಿತಿಮೀರಿದ ವಾಯುಮಾಲಿನ್ಯ: ಉಸಿರಾಡಲು ಪರದಾಡುತ್ತಿರುವ ಜನತೆ

ನವದೆಹಲಿ (ನ.6): ದೀಪಾವಳಿ ಸಂದರ್ಭದಲ್ಲೇ ದೆಹಲಿ ವಾಯುಮಾಲಿನ್ಯ ಮಟ್ಟ ಮಿತಿ ಮೀರಿದ್ದು ವಾಯು ಗುಣಮಟ್ಟ ಹದಗೆಟ್ಟಿದೆ.ಏರ್ ಕ್ವಾಲಿಟಿ ಅಂಡ್ ವೆದರ್ ಪೋರ್ಕಾಸ್ಟಿಂಗ್ ಅಂಡ್ ರಿಸರ್ಚ್, ಸೆಂಟರ್-ರನ್ ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಇಂಡೆಪೋ, ಬಿಡುಗಡೆಗೊಳಿಸಿದ್ದು, ಇದರಲ್ಲಿ ನಗರದ ಕೆಲ ಭಾಗಗಳು ಉಸಿರಾಟಕ್ಕೆ ಸಹ ಅತೀವವಾದ ಅಪಾಯಕಾರಿ ಮಟ್ಟದಲ್ಲಿರುವುದನ್ನು ತೋರಿಸುತ್ತಿದೆ.

ದೆಹಲಿಯ ಎಕ್ಯೂಐ 449ಕ್ಕೆ ತಲುಪಿದೆ ಚಾಂದಿನಿ ಚೌಕ್‍ನ ಸುತ್ತಲಿನ ಪ್ರದೇಶದಲ್ಲಿ ಪಿಎಂ 10ರ ಮಟ್ಟದ ವಾಯು ಗುಣಮಟ್ಟವಿದ್ದು, 437 ಎಕ್ಯೂಐ ಹೊಂದಿದೆ. ದೆಹಲಿ ವಿಮಾನ ನಿಲ್ದಾಣ ಟರ್ಮಿನಲ್ ಮೂರು ಮತ್ತು ದೆಹಲಿ ಯೂನಿವರ್ಸಿಟಿ ಪ್ರದೇಶಗಳಲ್ಲಿ 425, 470 ಹಾಗೂ 396 ಎಕ್ಯೂಐ ದಾಖಲಾಗಿದೆ. ದೆಹಲಿ ವಾಯು ಗುಣಮಟ್ಟ ಕೆಳಮಟ್ಟದಲ್ಲಿದ್ದು, ಗಾಲಿಯಲ್ಲಿನ ಹೊಗೆ ಹಾಗೂ ಭಾರೀ ಮಟ್ಟದ ಧೂಳಿನ ಕಣಗಳು ಉಸಿರಾಟ, ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಈ ದೀಪಾವಳಿಯಲ್ಲಿ ಪಟಾಕಿ ಹಚ್ಚುವುದನ್ನು ನಿಷೇಧಿಸಬೇಕೆಂಬ ಆಗ್ರಹ ಕೇಳಿಬಂದಿದೆ.

ದೆಹಲಿಯಲ್ಲಿ ಹವಾಮಾನ ಹಗಲಿನ ಮೇಲೆ 26 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ರಾತ್ರಿ ಸಮಯ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ದೆಹಲಿಯಲ್ಲಿ 68 ಪ್ರತಿಶತ ಗಾಳಿಯ ಆದ್ಯತೆ ಇರುತ್ತದೆ. ಹಬ್ಬದ ಋತುವಿನ ಕಾಲ ಹೆಚ್ಚಿನ ಮಾಲಿನ್ಯ, ಹೆಚ್ಚಿನ ವಾಹನಗಳು, ಗಾಳಿಯ ಗುಣಮಟ್ಟವನ್ನು ಹದಗೆಡಿಸಿದೆ ಎನ್ನಲಾಗಿದೆ. (ಎನ್.ಬಿ)

Leave a Reply

comments

Related Articles

error: