ಮೈಸೂರು

ಶೋಷಿತರಿಗೆ ಸ್ವಾವಲಂಬನೆಯ ದಾರಿತೋರುವ ಸಹಕಾರ ಸಂಘಗಳು: ವೇಣುಗೋಪಾಲ್

ಶ್ರೀವಿಶ್ವಕರ್ಮ ಪತ್ತಿನ ಸಹಕಾರ ಸಂಘ ನಿಯಮಿತದ 2017ನೇ ಸಾಲಿನ ಕ್ಯಾಲೆಂಡರ್‍ ಅನ್ನು ಪದಾಧಿಕಾರಿಗಳು ಭಾನುವಾರ ಪತ್ರಕರ್ತರ ಭವನದಲ್ಲಿ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಸರ್ವಜನ ಹಿತರಕ್ಷಣ ವೇದಿಕೆಯ ರಾಜ್ಯಾಧ‍್ಯಕ್ಷ ವೇಣುಗೋಪಾಲ್, ಸಹಕಾರ ಸಂಘವು ಕೇವಲ ಸಮಾಜದವರಿಗಷ್ಟೇ ಸಿಮೀತವಾಗದೇ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಡವರು, ಹಿಂದುಳಿದ ಪರಿಶಿಷ್ಟರಿಗೆ, ಮಹಿಳೆಯರ ಸ್ವಾವಲಂಬನೆಗೆ ಸಾಲದ ರೂಪದಲ್ಲಿ ಧನ ಸಹಾಯ ಮಾಡುತ್ತಿದ್ದು, ಇದರಿಂದ ಶೋಷಿತರು ಸಮಾಜದಲ್ಲಿ ಸ್ವಾವಲಂಬಯ ಬದುಕು ಸಾಗಿಸಬಹುದಾಗಿದೆ ಎಂದು ಶ್ಲಾಘಿಸಿದರು.

ಕಾಂಗ್ರೆಸ್ ಮುಖಂಡ ಧ್ರುವರಾಜ್ ಮಾತನಾಡಿ, ಸಹಕಾರಿ ಸಂಘವೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿದೆ. ಕಳೆದ 13 ವರ್ಷಗಳಲ್ಲಿ ತನ್ನ ವ್ಯವಹಾರವನ್ನು ಕೋಟಿಗೂ ಮೀರಿ ವೃದ್ಧಿಸಿಕೊಂಡಿದ್ದು ಸವಲತ್ತುಗಳನ್ನು ಪಡೆಯುವ ಮೂಲಕ ಪ್ರತಿಯೊಬ್ಬರೂ ಸ್ವಾವಲಂಬಿಗಳಾಗಬೇಕು ಎಂದು ಆಶಿಸಿದರು.

ಈ ಸಂದರ್ಭ ಸಂಘದ ಅಧ್ಯಕ್ಷ ಎಸ್.ವಿಜಯಕುಮಾರ್, ಕಾರ್ಯದರ್ಶಿ ಎನ್.ಕುಮಾರ್, ವೆಂಕಟಾಚಾರ್, ನಿರ್ದೇಶಕರಾದ ನರಸಿಂಹಮೂರ್ತಿ, ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಶಿಂಗ್ ಲಿ. ಮಾಜಿ ಅಧ್ಯಕ್ಷ ಅನಂತು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: