ಮೈಸೂರು

ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ; ಜ.4ರಂದು

ಕರ್ನಾಟಕ ನಾಟಕ ಅಕಾಡೆಮಿಯ 2015-16 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ.4 ರಂದು ಹಮ್ಮಿಕೊಳ್ಳಲಾಗಿದೆ ಎಂದು ಭಾನುವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಎಲ್.ಬಿ.ಶೇಖ ತಿಳಿಸಿದರು.

ಸಮಾರಂಭವನ್ನು ಅಂದು ಸಂಜೆ 5:30ಕ್ಕೆ ಕಲಾಮಂದಿರದಲ್ಲಿ ಆಯೋಜಿಸಿದ್ದು, ಸಾಹಿತಿ ಬರಗೂರು ರಾಮಚಂದ್ರಪ್ಪ ಚಾಲನೆ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿ ಪುರಸ್ಕೃತರ ವಿಶೇಷ ಸಂಚಿಕೆ ‘ರಂಗದಂಬಾರಿ’ಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‍ ಸೇಠ್ ಬಿಡುಗಡೆಗೊಳಿಸುವರು.

ಮುಖ್ಯ ಅತಿಥಿಗಳಾಗಿ ಮೇಯರ್ ಎಂ.ಜೆ. ರವಿಕುಮಾರ್, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ರೇಷ್ಮೆ ಉದ್ಯಮಗಳ ನಿಗಮ ಮಂಡಳಿ ಅಧ್ಯಕ್ಷ ಎಂ.ಕೆ. ಸೋಮಶೇಖರ್, ಶಾಸಕರಾದ ಜಿ.ಟಿ. ದೇವೇಗೌಡ, ವಾಸು, ಜಿಲ್ಲಾಧಿಕಾರಿ ಡಿ.ರಂದೀಪ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಹಾಗೂ ನಿರ್ದೇಶಕ ಕೆ.ಎ. ದಯಾನಂದ ಉಪಸ್ಥಿತರಿರುವರು.

ಪ್ರಶಸ್ತಿ ಪುರಸ್ಕೃತರ ಪಟ್ಟಿ :

ರಂಗಭೂಮಿಯ ಗುರುತರ ಸೇವೆಗಾಗಿ ದಾವಣಗೆರೆಯ ಮನುಬಾಯಿ (2015) ಮತ್ತು ಹಂಸಲೇಖ (2016) ಇವರುಗಳಿಗೆ ಗೌರವ ಪ್ರಶಸ್ತಿಯನ್ನು ನೀಡಲಾಗಿದೆ.

ಕಲ್ಚರ್ಡ್ ಕೆಮೆಡಿಯನ್ ಕೆ.ಹಿರಿಣ್ಣಯ್ಯ ದತ್ತಿ ಪುರಸ್ಕಾರವನ್ನು ಮಧುಕೇಶ್ ಚಿಂದೋಡಿ (2015) ಮತ್ತು ಮಹದೇವಪ್ಪ (2016). ನಟರತ್ನ ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರವನ್ನು ಬಾಗಲಕೋಟೆಯ ಗೂಡು ಸಾಹೇಬ್ ಚಟ್ನಿಹಾಳ (2015) ಮತ್ತು ತುಮಕೂರಿನ ಬಿ.ಗಂಗಾಧರ (2016), ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರವನ್ನು ಮಮತಾ ಗುಡೂರು ಮತ್ತು ರಾಣಿಬೆನ್ನೂರಿನ ಉಮಾ (2016). ಪ್ರಕಾಶ ಗರುಡ ಅವರ ‘ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ’ಗೆ ಮತ್ತು ‘ರಂಗದ ಒಳಗೆ-ಹೊರಗೆ’ ಕೃತಿಗಾಗಿ ದಿವಂಗತ ಗೋಪಾಲ ವಾಜಪೇಯಿಯ ಇವರುಗಳಿಗೆ ರಂಗಭೂಮಿಯ ಪುಸ್ತಕ ಪುರಸ್ಕಾರವನ್ನು ನೀಡಲಾಗಿದೆ ಇದಲ್ಲದೇ ರಾಜ್ಯದಾದ್ಯಂತ ಹಲವಾರು ಕಲಾವಿದರಿಗೆ, ತಂತ್ರಜ್ಞರಿಗೆ, ನಿರ್ದೇಶಕರುಗಳು ಸೇರಿದಂತೆ 50 ಜನಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಮೆರವಣಿಗೆ : ಅಂದು ಮಧ್ಯಾಹ್ನ 3ರಿಂದ ನಗರದ ಕೋಟೆ ಆಂಜನೇಯ ದೇವಸ್ಥಾನದಿಂದ ವಿವಿಧ ಕಲಾ ತಂಡಗಳೊಂದಿಗೆ ಪ್ರಶಸ್ತಿಗೆ ಭಾಜನರಾದ ಗಣ್ಯರನ್ನು ಸಾರೋಟಿನಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಗುವುದು ಎಂದರು. ತಮ್ಮ ಸೇವಾವಧಿಯ ಕೊನೆಯ ಪ್ರಶಸ್ತಿ ಪ್ರದಾನ ಸಮಾರಂಭವಾಗಿದೆ ಎಂದು ಉಲ್ಲೇಖಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಬಿ.ಮಂಜುನಾಥ ಆರಾಧ್ಯ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಿವಮೂರ್ತಿ ಕಣ್ಯ ಹಾಗೂ ಸದಸ್ಯ ರಾಮಚಂದ್ರ ಉಪಸ್ಥಿತರಿದ್ದರು.

Leave a Reply

comments

Related Articles

error: