ಕರ್ನಾಟಕಪ್ರಮುಖ ಸುದ್ದಿ

ಮತದಾರರ ತೀರ್ಪಿಗೆ ತಲೆಬಾಗುತ್ತೇನೆ: ಮಧು ಬಂಗಾರಪ್ಪ

ಶಿವಮೊಗ್ಗ (ನ.7): ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಸೋಲಿನ ಕುರಿತು ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದು, ಮತದಾರರ ತೀರ್ಪಿಗೆ ನಾನು ತಲೆಬಾಗುತ್ತೇನೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆಮಾತನಾಡಿದ ಅವರು, ಸಮಯದ ಅಭಾವದಿಂದ ಈ ಚುನಾವಣೆ ಸೋತಿದ್ದೇವೆ ಎಂದೆನಿಸುತ್ತಿದೆ. ನಾವು ಹೇಳಿದಂತೆ ಕೆಲಸ ಕಾರ್ಯ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದರು.

ವೈಯಕ್ತಿಕ ಟೀಕೆ, ಟಿಪ್ಪಣಿ ಮಾಡುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಕುಟುಂಬವನ್ನು ರಾಜಕೀಯದಲ್ಲಿ ತರಬಾರದು, ತರುವುದರಿಂದ ಜನರಿಗೂ ಬೇಸರವಾಗಬಹುದು. ನಮ್ಮ ಜಿಲ್ಲೆಯಲ್ಲಿ ಸಮ್ಮಿಶ್ರ ಸರ್ಕಾರ ಮತ್ತು ಬಂಗಾರಪ್ಪನವರ ಶಕ್ತಿ ಇದೆ. ಹಾಗಾಗಿ ಅದನ್ನು ಮುಂದಿನ ದಿನಗಳಲ್ಲಿ ಜನಪರ ಕೆಲಸ ಮಾಡುತ್ತಾ ಮತ್ತೆ ಜನರ ಆಶೀರ್ವಾದ ಬೇಡುವೆ ಎಂದರು. (ಎನ್.ಬಿ)

Leave a Reply

comments

Related Articles

error: