ಮೈಸೂರು

ವೀರಶೈವ ಕ್ಷೇಮಾಭಿವೃದ್ಧಿ ಸಭಾ ಅಸ್ತಿತ್ವಕ್ಕೆ

ಮೈಸೂರಿನ ಸರ್ದಾರ್ ವಲ್ಲಭಾಯಿ ಪಟೇಲ್ ನಗರ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ವಾಸವಾಗಿರುವ ವೀರಶೈವರನ್ನು ಸಂಘಟನೆ ಮಾಡಿ ಅವರುಗಳ ಕುಂದು-ಕೊರತೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಂಬರ್‍ 537, 4ನೇ ತಿರುವು ಸರ್ದಾರ್ ವಲ್ಲಭಾಯಿ ಪಟೇಲ್ ನಗರದಲ್ಲಿ ಸುವರ್ಣಮ್ಮನವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಸುವರ್ಣಮ್ಮ, ಉಪಾಧ್ಯಕ್ಷರಾಗಿ ಎಂ. ಶಾರದ, ಖಜಾಂಚಿಯಾಗಿ ರಾಜಶೇಖರ ಮೂರ್ತಿ, ಗೌರವ ಕಾರ್ಯದರ್ಶಿಯಾಗಿ ಹೆಚ್.ಬಿ. ಗಿರೀಶ್ ನಿರ್ದೇಶಕರುಗಳಾಗಿ ಟಿ. ಪುಟ್ಟಣ್ಣಯ್ಯ, ಮಹದೇವಪ್ರಸಾದ್, ಸಿದ್ಧಲಿಂಗಮ್ಮ ಆಯ್ಕೆಯಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9449089772ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: