ಮೈಸೂರು

ನ.11 : ನಟನ ರಂಗಶಾಲೆಯಲ್ಲಿ ‘ಗುಬ್ಬಚ್ಚಿಗಳು’ ಸಿನಿಮಾ ಪ್ರದರ್ಶನ

ಮೈಸೂರು,ನ.7:- ರಾಮಕೃಷ್ಣನಗರದಲ್ಲಿರುವ ಮಂಡ್ಯರಮೇಶ್ ನೇತೃತ್ವದ ನಟನರಂಗಶಾಲೆಯಲ್ಲಿ  ಸಹೃದಯ ಪ್ರೇಕ್ಷಕರನ್ನು ಹುಟ್ಟು ಹಾಕಲು ವಾರಾಂತ್ಯರಂಗ ಪ್ರದರ್ಶನಗಳನ್ನು ಹಮ್ಮಿಕೊಂಡಿದ್ದು, ನವೆಂಬರ್ 11ರಂದು ಸಂಜೆ 6.30ಕ್ಕೆ 2008ರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಅತ್ಯುತ್ತಮ ಮಕ್ಕಳ ಚಿತ್ರ’ ಪ್ರಶಸ್ತಿ ಪುರಸ್ಕೃತ ಸಿನಿಮಾ ‘ಗುಬ್ಬಚ್ಚಿಗಳು’ಪ್ರದರ್ಶನಗೊಳ್ಳುತ್ತಿದೆ.  ಬಿ. ಸುರೇಶಅವರು ಈ ಚಿತ್ರವನ್ನು ನಿರ್ಮಿಸಿದ್ದು, ಅಭಯ ಸಿಂಹ ಅವರು ನಿರ್ದೇಶಿಸಿದ್ದಾರೆ.

ಇಬ್ಬರು ಮುಗ್ಧ ಮಕ್ಕಳು ಈ ಕಾಂಕ್ರೀಟ್‍ಕಾಡಿನಲ್ಲಿ ‘ಗುಬ್ಬಚ್ಚಿ’ಯನ್ನು ಹುಡುಕಿಕೊಂಡು ಹೋಗುವುದೇ ಈ ಕಥೆಯ ಜೀವಾಳ. ಈ ಹುಡುಕಾಟವು ಅವರಿಗೆ ಜೀವನದ ಅನೇಕ ಮಜಲುಗಳನ್ನು ಪರಿಚಯಿಸುತ್ತಾ ಹೋಗುತ್ತದೆ.ಇಡೀ ಚಿತ್ರದಲ್ಲಿ ಜಗತ್ತನ್ನು ಮಕ್ಕಳ ನೋಟದಲ್ಲೇ ತೋರಿಸಲಾಗಿದೆ. ಕೊನೆಗೂ ಗುಬ್ಬಚ್ಚಿಗೂಡಿಗೆ ಬಂತೇ?ಎಂಬುದನ್ನು ನಟನ ರಂಗಶಾಲೆಗೆ ಹೋಗಿಯೇ ನೋಡಬೇಕು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: