ಮೈಸೂರು

ಕಣ್ಣಿನ ತಪಾಸಣೆ ನಡೆಸುವ ಮೂಲಕ ಹೊಸ ವರ್ಷಾಚರಣೆ

ಚಾಮುಂಡಿಪುರಂ 6ನೇ ಕ್ರಾಸ್ ನಲ್ಲಿರುವ ಅರುಣೋದಯ ವಿಶೇಷ ಮಕ್ಕಳ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಮ.ವಿ. ರಾಮಪ್ರಸಾದ್ ಹೊಸ ವರ್ಷವನ್ನು ವಿಶೇಷ ಮಕ್ಕಳಿಗೆ ಹಾಗೂ ಪೌರಕಾರ್ಮಿಕರಿಗೆ ಕಣ್ಣಿನ ತಪಾಸಣೆ ಮಾಡಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿ ಕನ್ನಡಕವನ್ನು ಕೊಡಿಸುವುದರ ಮೂಲಕ ಹೊಸ ವರ್ಷವನ್ನು ವಿನೂತನವಾಗಿ ಆಚರಿಸಿದರು.

ಕಣ್ಣಿನ ತಪಾಸಣೆ ಶಿಬಿರದಲ್ಲಿ 320 ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. 180 ಜನಕ್ಕೆ ಕನ್ನಡಕವನ್ನು ಉಚಿತವಾಗಿ ವಿತರಿಸಲಾಯಿತು. ಇದರಲ್ಲಿ ಅಂಗವಿಕಲರು, ಬುದ್ಧಿಮಾಂದ್ಯ ಮಕ್ಕಳು, ಪೌರಕಾರ್ಮಿಕರು ಚಿಕಿತ್ಸೆ ಪಡೆದಿರುವುದು ವಿಶೇಷವಾಗಿತ್ತು. ಮಹಾವೀರ ಕಣ್ಣಿನ ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿದರು.

ಮ.ವಿ. ರಾಮಪ್ರಸಾದ್  ಹಲವಾರು ವರ್ಷಗಳಿಂದ ಸಾಲು ಸಸಿ ನೆಡುವ ಮೂಲಕ, ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ವಿಶೇಷವಾಗಿ ಹೊಸ ವರ್ಷವನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ ಪ್ರಕಾಶ್ , 6ನೇ ವಾರ್ಡಿನ ಅಧ್ಯಕ್ಷ ಸಂದೀಪ್, ಮಹಾವೀರ ಕಣ್ಣಿನ ಆಸ್ಪತ್ರೆಯ ನಿರ್ದೇಶಕ ಗೌತಮ್, ಮುಖಂಡರಾದ ಜೋಗಿ ಮಂಜು, ವಿಕ್ರಮ್, ಅರವಿಂದ, ಭಾನುಪ್ರಕಾಶ್, ಶ್ರೀನಿವಾಸ್, ಶಿವಕುಮಾರ್, ರಾಮಚಂದ್ರ, ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: