ಪ್ರಮುಖ ಸುದ್ದಿ

ಟಿಪ್ಪು ಜಯಂತಿ ದಿನದಂದು ಬಲವಂತದ ಬಂದ್‍ಗೆ ಮುಂದಾದರೆ ನಿರ್ದಾಕ್ಷಿಣ್ಯ ಕಾನೂನು ಕ್ರಮ : ಡಾ.ಸುಮನಾ ಡಿ. ಪನ್ನೇಕರ್ ಎಚ್ಚರಿಕೆ

ರಾಜ್ಯ(ಮಡಿಕೇರಿ)ನ.9:- ಟಿಪ್ಪು ಜಯಂತಿ ದಿನದಂದು ಬಲವಂತದ ಬಂದ್‍ಗೆ ಮುಂದಾದರೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನಾ ಡಿ. ಪನ್ನೇಕರ್  ಎಚ್ಚರಿಸಿದ್ದಾರೆ.

ಸೋಮವಾರಪೇಟೆಯಲ್ಲಿನ ಬಂದೋಬಸ್ತ್ ಬಗ್ಗೆ ಪರಿಶೀಲನೆ ನಡೆಸಿ, ಪೊಲೀಸ್ ಅಧಿಕಾರಿಗಳ ಬಗ್ಗೆ ಅಗತ್ಯ ಸೂಚನೆಗಳನ್ನು ನೀಡಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.  ಜನರು ಸ್ವಯಂಪೇರಿತ ಬಂದ್ ನಡೆಸಿದರೆ ಯಾರದೂ ಅಭ್ಯಂತರವಿಲ್ಲ. ಆದರೆ ಕಿಡಿಗೇಡಿಗಳು ಬಂದ್ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಗೆ ಪಾಸ್ತಿ ಹಾನಿ, ವಾಹನಗಳಿಗೆ ಹಾನಿ ಮಾಡುವ ಕೃತ್ಯಕ್ಕೆ ಕೈಹಾಕಿದರೆ, ಪೊಲೀಸ್ ಇಲಾಖೆಯಿಂದ ಸೂಕ್ತ ಕ್ರಮಕೈಗೊಳ್ಳಲಾಗುವುದು. ಈಗಾಗಲೆ ಸರ್ವೋಚ್ಛ ನ್ಯಾಯಾಲಯದಿಂದ ಸುತ್ತೋಲೆ ಬಂದಿದ್ದು, ಅದರಂತೆ ಕ್ರಮ ಜರುಗಿಸಲಾಗುತ್ತದೆ. ಸೂಕ್ತ ಸ್ಥಳಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಲಾಗಿದೆ. ಅನೇಕರ ಚಲನವಲನಗಳ ಬಗ್ಗೆ ನಿಗಾ ಇಡಲಾಗಿದೆ ಎಂದರು.

ಸೋಮವಾರಪೇಟೆಯಲ್ಲಿ ಒಬ್ಬರು ಎ.ಎಸ್.ಪಿ, ಡಿವೈಎಸ್‍ಪಿ, ಕೆಎಸ್‍ಆರ್‍ಪಿಯ ನಾಲ್ಕು, ಆರ್‍ಎಎಫ್ ಒಂದು, ಡಿ.ಎ.ಆರ್.ನ 8 ತುಕಡಿಗಳನ್ನು ನಿಯೋಜಿಸಲಾಗುತ್ತದೆ. 80 ಮಂದಿ ಪೊಲೀಸ್ ಸಿಬ್ಬಂದಿಗಳು, 40 ಹೊಂ ಗಾರ್ಡ್ಸ್  ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: