ಮೈಸೂರು

ಅರಸು ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದಾರೆ: ಹೆಚ್.ವಿಶ್ವನಾಥ್ ಬಣ್ಣನೆ

ಕರ್ನಾಟಕ ಮರು ನಾಮಕರಣದಲ್ಲಿ ಚದುರಂಗರ ಅವರ ಪಾತ್ರ ಹಿರಿದು ಎಂದು ಕಾಂಗ್ರೆಸ್ ಮುಖಂಡ ಅಡಗೂರು ಹೆಚ್. ವಿಶ್ವನಾಥ್ ಬಣ್ಣಿಸಿದರು.

ಅರಸು ಚಿಂತಕರ ಚಾವಡಿ ವೇದಿಕೆಯ ವತಿಯಿಂದ ಮೈಸೂರಿನ ರೋಟರಿ ಸಭಾಂಗಣದಲ್ಲಿ ಏರ್ಪಡಿಸಲಾದ ಚದುರಂಗ ಅವರ 102ನೇ ಜನ್ಮದಿನ ಸ್ಮರಣೆ ಕಾರ್ಯಕ್ರಮವನ್ನು ಹೆಚ್.ವಿಶ್ವನಾಥ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ಚದುರಂಗ ಅವರು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರು ಬರವಣಿಗೆಗಿಂತಲೂ ಬದುಕು ದೊಡ್ಡದು ಎಂದು ನಂಬಿದ್ದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡುವಂತೆ ಸಲಹೆ ನೀಡಿ ಯಶಸ್ವಿಯಾದರು ಎಂದರು.

ಅರಸು ಅವರ ಕಾಲದಲ್ಲಿ “ಉಳುವವನೇ ಭೂಮಿಯ ಒಡೆಯ” ಕಾನೂನು ಸಮರ್ಪಕವಾಗಿ ಜಾರಿಯಾಯಿತು. ಈಗ ಅರಸರಿಲ್ಲದಿದ್ದರೂ ಅವರ ಅಭಿವೃದ್ಧಿ ಕಾರ್ಯಗಳು ಹಸಿರಾಗಿ ಉಳಿದಿವೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಐಪಿಎಸ್ ಅಧಿಕಾರಿ ಜಯರಾಮ ರಾಜೇ ಅರಸ್, ಸಾಹಿತಿ ಲಕ್ಷ್ಮಿಕಾಂತ ರಾಜೇ ಅರಸ್, ಮೈಸೂರು ವಿವಿ ಎಂ.ಎ ಪತ್ರಿಕೋದ್ಯಮದಲ್ಲಿ 5 ಚಿನ್ನದ ಪದಕ ಪಡೆದ ಶವೇಂದ್ರ ಜಿ.ಅರಸ್ ಅವರನ್ನು ಸನ್ಮಾನಿಸಲಾಯಿತು.

ಉಡುಪಿ ಕೃಷ್ಣಮಠದ ವಿಶ್ವಾಧಿರಾಜ ಸ್ವಾಮಿ, ಅರಗು ಮತ್ತು ಬಣ್ಣದ ಕಾರ್ಖಾನೆಯ ಅಧ್ಯಕ್ಷ ಎಚ್.ಎ ವೆಂಕಟೇಶ್, ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: