ಪ್ರಮುಖ ಸುದ್ದಿಮೈಸೂರು

ಪತ್ರಕರ್ತರು, ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ

ಶಿಬಿರಕ್ಕೆ ಚಾಲನೆ ನೀಡಿದ ಬೇಬಿಮಠದ ಶ್ರೀಗಳು

ಮೈಸೂರು, ನ.9 : ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ಹಾಗೂ ಅವರ ಕುಟುಂಬದ ಉತ್ತಮ ಆರೋಗ್ಯಗಾಗಿ ನಾರಾಯಣ ಹೃದಯಾಲಯ, ಜೆಎಸ್ ಎಸ್ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬೇಬಿ ಮಠದ  ತ್ರೀನೇತ್ರ ನಂದಾ ಮಹಂಥಾ ಸ್ವಾಮೀಜಿ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿ. ನಂತರ ಮಾತನಾಡಿದ ಅವರು ಪತ್ರಕರ್ತರಿಗೆ ಆರೋಗ್ಯ ತಪಾಸಣೆ ಶಿಬಿರ ಅಗತ್ಯ ಇದೆ.ಕರಗದ ಸಂಪತ್ತು ಎಂದರೆ ಸಂಸ್ಕೃತಿ,ಸಂಸ್ಕಾರ, ಆಯುರ್ವೇದ ಎಂದು ಹೇಳಿದರೆ ತಪ್ಪಾಗದು. ಹಿಂದಿನವರು 120 ವರ್ಷಗಳ ಕಾಲ ಬದುಕುತ್ತಿದ್ದರು.ಆದರೆ ಈಗ 20-30 ವರ್ಷಕ್ಕೆ ಚಿಕ್ಕ ಚಿಕ್ಕ ಕಾಯಿಲೆಗಳಿಗೆ ಸಾವನ್ನಪ್ಪುತ್ತಿದ್ದಾರೆ.ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ದಿ ಯಾಗಬೇಕು ಆಗ ಮಾತ್ರ ನಮ್ಮ ದೇಶ ಅಭಿವೃದ್ಧಿ ಆಗಲು ಸಾಧ್ಯ.

ಪ್ರತಿಯೊಬ್ಬರಿಗೂ ಆಯುರ್ವೇದ ಚಿಕಿತ್ಸೆ ಮುಖ್ಯವಾದದ್ದು.ಪತ್ರಕರ್ತರು ದೇಶದ ಒಂದು ಅಂಗ.ಈ ಕ್ಷೇತ್ರ ಅಮೂಲ್ಯವಾದ್ದು.ನೀವು ನಿಮ್ಮ ಕುಟುಂಬ ಆರೋಗ್ಯವಾಗಿದ್ದರೇ ಈ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಆಗುವುದು ಎಂದು ತಿಳಿಸಿದರಲ್ಲದೇ ಈ ಉಚಿತ ಆರೋಗ್ಯ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ನಂತರ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಆಯುರ್ವೇದ ಚಿಕಿತ್ಸೆ ಕುರಿತು ಮಾತನಾಡಿ, ಪುರಾತನ ಕಾಲದಿಂದಲೂ ಆಯುರ್ವೇದ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿದ್ದು ಯಾವುದೇ ಅಡ್ಡ ಪರಿಣಾಮಗಳಿಲ್ಲ, ಇತ್ತೀಚಿನ ಸಂಶೋಧನೆಗಳಿಂದ ಕ್ಯಾನ್ಸರ್ ಸೇರಿದಂತೆ ಎಲ್ಲಾ ಕಾಯಿಲೆಗಳಿಗೂ ತ್ವರಿತವಾಗಿ ಗುಣಮುಖವಾಗಲಿದ್ದು, ಹಲೋಪತಿಗಿಂತಲೂ ಪೂರ್ವದಲ್ಲಿ ನಮ್ಮ ಹಿರಿಯರು ಈ ಚಿಕಿತ್ಸಾ ಪದ್ಧತಿಯನ್ನು ಕಂಡು ಹಿಡಿದಿದ್ದರು ಎಂದು ತಿಳಿಸಿದರು.

ಇದೇ ಸಂದರ್ಭ ತ್ರಿನೇತ್ರ ಸ್ವಾಮೀಜಿಗಳಿಗೆ ಅಭಿನಂದಿಸಲಾಯಿತು. ಪ್ರಕಾಶ್ ಯೋಗಿ, ಮಾಜಿ ಸಚಿವ ವಿಜಯಶಂಕರ್,ಡಾ.ಶಣೈ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ,ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು ಸೇರಿದಂತೆ ಪತ್ರಕರ್ತರು ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು.

ಮೂಳೆ ಸಾಂದ್ರತೆ, ಮಧುಮೇಹ, ರಕ್ತದೊತ್ತಡ, ಹೃದಯ ತಪಾಸಣೆ ಸೇರಿದಂತೆ ಇತರೆ ಸಾಮಾನ್ಯ ಕಾಯಿಲೆಗಳಿಗೆ ತಜ್ಞ ವೈದ್ಯರು ತಪಾಸಣೆ ನಡೆಸಿ ಉಚಿತವಾಗಿ ಔಷಧಿ ವಿತರಿಸಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: