ಮೈಸೂರು

ನೋಟು ಅಮಾನ್ಯೀಕರಣ ಮಾಡಿ ಎರಡು ವರ್ಷ ಸಂದ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ

ಮೈಸೂರು,ನ.9:- ನೋಟು ಅಮಾನ್ಯೀಕರಣ ಮಾಡಿ ಎರಡು ವರ್ಷ ಸಂದ ಹಿನ್ನೆಲೆಯಲ್ಲಿ  ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಗಾಂಧಿಚೌಕದ ಬಳಿಯಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕ  ಪರಿಸ್ಥಿತಿಯೇ ತಲೆಕೆಳಗಾಗಿದೆ. ಜನತೆ ಈಗಲೂ ಸಂಕಷ್ಟ ಪಡುವಂತಾಗಿದೆ. ಎರಡು ವರ್ಷವಾದರೂ ಇನ್ನೂ ಪರಿಸ್ಥಿತಿ ಸುಧಾರಿಸಿಲ್ಲ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಹೊಣೆ ಎಂದರಲ್ಲದೇ, ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ ಹಾಕಲಾಗುತ್ತದೆ ಎಂದಿದ್ದರು. ಅದು ಕೂಡ ಆಗಿಲ್ಲ. ಸುಳ್ಳನ್ನೆ ಹೇಳಿ ಜನತೆಯನ್ನು ಮೋದಿ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು. ಮೋದಿ ಹಠಾವೋ ದೇಶ ಬಚಾವೋ ಘೊಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ವಾಸು, ಜಿಲ್ಲಾ ಅಧ್ಯಕ್ಷರಾದ ಡಾ ಬಿ ಜೆ.ವಿಜಯ ಕುಮಾರ್  ಮತ್ತು ನಗರ ಅಧ್ಯಕ್ಷರಾದ ಆರ್.ಮೂರ್ತಿ, ಆರ್. ಪ್ರಕಾಶ್ ಕುಮಾರ್  ಪಾಲಿಕೆಯ ಹಾಲಿ, ಮಾಜಿ ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: