ಮೈಸೂರು

ಅಕ್ರಮ ಕಲ್ಲು ಗಣಿಗಾರಿಕೆ ಯಿಂದ ಕೆಆರ್ ಎಸ್ ಗೆ ಗಂಡಾಂತರ : ಕೆಆರ್ ಎಸ್ ಉಳಿಸಿ ಪಾದಯಾತ್ರೆಗೆ ಚಾಲನೆ

ಮೈಸೂರು,ನ.9:- ಅಕ್ರಮ ಕಲ್ಲು ಗಣಿಗಾರಿಕೆ ಯಿಂದ ಕೆಆರ್ ಎಸ್ ಗೆ ಗಂಡಾಂತರ ಕಾದಿದೆ. ಹೀಗಾಗಿ ಅವೈಜ್ಞಾನಿಕ ಗಣಿಗಾರಿಕೆ ತಡೆಯುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪಾದಯಾತ್ರೆ ಆಯೋಜಿಸಿದ್ದು, ಇಂದು ನಗರದ ಕೋಟೆ ಆಂಜನೇಯ ದೇವಸ್ಥಾನದ ಬಳಿ ಚಾಲನೆ ನೀಡಲಾಯಿತು.

ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟು ಬೆಂಗಳೂರಿನವರೆಗೆ  ಸುಮಾರು 7ದಿನಗಳ ಕಾಲ 150 ಕಿಮೀ ಪಾದಯಾತ್ರೆ  ನಡೆಯಲಿದೆ.

ಅಕ್ರಮ ಕಲ್ಲು ಗಣಿಗಾರಿಕೆ ಯಿಂದ ಕೆಆರ್ ಎಸ್ ಗೆ ಗಂಡಾಂತರ ಕಾದಿದೆ. ಬೆಂಗಳೂರು ದಕ್ಷಿಣ ತಾಲೂಕಿನ ತಾವರಕೆರೆ ಹೋಬಳಿ ಸೇರಿದಂತೆ ಚಿಕ್ಕನಹಳ್ಳಿ, ರಾಜನಹಳ್ಳಿ ಚುಂಚನಕುಪ್ಪೆ ಮುಂತಾದ ಕಡೆ ಅವೈಜ್ಞಾನಿಕ ಗಣಿಗಾರಿಕೆ ನಡೆಯುತ್ತಿದ್ದು, ಇದನ್ನು ತಡೆಯಬೇಕು. ಇದರಿಂದ ಅಕ್ಕಪಕ್ಕದ ಮನೆಗಳು ಬಿರುಕು ಬಿಟ್ಟಿವೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸದಸ್ಯರು ಆಗ್ರಹಿಸಿದರು.  ಗಣಿಗಾರಿಕೆ ನಿಲ್ಲದಿದ್ದರೆ  ಗಾಳಿ ನೀರು ಕಲುಷಿತವಾಗಿ ಜಾನುವಾರುಗಳ ಮಾರಣ ಹೋಮ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಗಿರೀಶ್ ಕುಮಾರ್  ಮುಂತಾದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: