ಮೈಸೂರು

ಎಂ ಪ್ರದೀಪ್‍ ಅವರಿಗೆ ಪಿ.ಹೆಚ್‍ಡಿ ಪದವಿ

ಮೈಸೂರು,ನ.9:- ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಶ್ರೀ ಜಯ ಚಾಮರಾಜೇಂದ್ರ ಇಂಜಿನಿಯರಿಂಗ್‍ ಕಾಲೇಜಿನಲ್ಲಿ ತರಬೇತಿ ಮತ್ತು ಉದ್ಯೋಗಾಧಿಕಾರಿಯಾ ಗಿಕಾರ್ಯನಿರ್ವಹಿಸುತ್ತಿರುವ  ಎಂ ಪ್ರದೀಪ್‍ ಅವರಿಗೆ, ಅಕ್ಟೋಬರ್ 2018 ರಲ್ಲಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ“A Study on Advances in Training and development and related issues in Information Technology companies”ಎಂಬ ಮಹಾಪ್ರಬಂಧಕ್ಕೆ ಪಿಹೆಚ್.ಡಿ. ಪದವಿ ಪ್ರದಾನಿಸಲಾಗಿದೆ.

ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ನಿರ್ವಹಣಾಕೇಂದ್ರದ ಪ್ರಾಧ್ಯಾಪಕರು ಹಾಗೂ ಡೀನ್‍ ಡಾ. ಪಿ ನಾಗೇಶ್‍ ಅವರ ಮಾರ್ಗದರ್ಶನದಲ್ಲಿ ಎಂ ಪ್ರದೀಪ್ ಅವರು ಪಿಹೆಚ್.ಡಿ ಪದವಿಯನ್ನು ಪಡೆದಿರುತ್ತಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: