
ಕಾಳಧನಿಕರನ್ನು ಮಟ್ಟಹಾಕಲು ನೋಟು ಅಮಾನ್ಯ ಅಸ್ತ್ರವನ್ನು ಬಳಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಎದುರಾಗಿರುವ ಕಂಟಕದ ನಿವಾರಣೆಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಅಭಿಮಾನಿಗಳು ನವಚಂಡಿಕಾ ಮಹಾಯಾಗವನ್ನು ನಡೆಸಿದ್ದಾರೆ.
ಕುಂದಾಪುರ ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾವಿರಾರು ಅಭಿಮಾನಿಗಳ ಯಾಗವನ್ನು ಮಾಡಿ ಅವರ ಶ್ರೇಯಸ್ಸಿಗೆ ಕೋರಲಾಗಿದೆ. ಬಿಜೆಪಿ ನಾಯಕ ಸುಕುಮಾರ ಶೆಟ್ಟಿ ನೇತೃತ್ವದಲ್ಲಿ ಜಡ್ಕಲ್ ನಿಂದ ನಡೆದ 12 ಕಿ.ಮೀ. ದೂರ ಮಹಿಳೆಯರು, ವೃದ್ಧರು, ಅಂಗವಿಕಲರು ಪಾದಯಾತ್ರೆ ಮೂಲಕ ಆಗಮಿಸಿ ಯಾಗದಲ್ಲಿ ಪಾಲ್ಗೊಂಡರು.
ಅಭಿಮಾನಿಗಳು ಮೋದಿಯವರ ಯಶಸ್ಸು ಮತ್ತು ಶ್ರೇಯಸ್ಸಿಗೆ ಯಾಗದಲ್ಲಿ ಪಾಲ್ಗೊಂಡು ಪ್ರಾರ್ಥಿಸಿದ್ದಾರೆ. ಅಲ್ಲದೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಅಧಿಕಾರಕ್ಕೇರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕೆಂದು ಹರಕೆ ಮಾಡಿದ್ದಾರೆ.