
ಮೈಸೂರು
ಎಸ್ ಜೆ ಸಿ ಇ ಯಲ್ಲಿ ಕನ್ನಡ ರಾಜ್ಯೋತ್ಸವ ನಾಳೆ
ಮೈಸೂರು,ನ.9 : ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಸಾಹಿತ್ಯ ಸಂಘ, ಎಸ್.ಜೆ.ಸಿ.ಇ ಸಂಪಾದಕ ಮಂಡಳಿಯು ನ.10ರಂದು ಕನ್ನಡ ರಾಜ್ಯೋತ್ಸವ ಏರ್ಪಡಿಸಲಾಗಿದೆ.
ಅಂದು ಮದ್ಯಾಹ್ನ 2.30ಕ್ಕೆ ಎಸ್.ಜೆ.ಸಿಇ ಕಾಲೇಜಿನ ಐ.ಎಸ್.ಸಭಾಂಗಣದಲ್ಲಿ ಏರ್ಪಡಿಸಲಾಗದೆ.
ಅಂಕರಣಕಾರ ಡಾ.ಕಲೀಮ್ ಉಲ್ಲಾ ಹಾಗೂ ಉಪನ್ಯಾಸಕ ಬೆಳವಾಡಿ ಮಂಜುನಾಥ್ ಆಗಮಿಸಲಿದ್ದಾರೆ. ಜೆಎಸ್ಎಸ್ ವಿವಿಯ ಉಪಕುಲಪತಿ ಡಾ.ಬಿ.ಜಿ.ಸಂಗಮೇಶ್ವರ, ಪ್ರಾಂಶುಪಾಲ ಡಾ.ಟಿ.ಎನ್.ನಾಗಭೂಷಣ, ಕುಲಸಚಿವ ಡಾ.ಕೆ.ಎಸ್.ಲೋಕೇಶ್ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ರಸಪ್ರಶ್ನೆ ಸ್ಪರ್ಧೆ, ಏಕಪಾತ್ರಾಭಿನಯ, ಚಲನಚಿತ್ರ ಸಂಭಾಷಣೆ, ಅನುಕರಣೆ ಇನ್ನಿತರ ಕಾರ್ಯಕ್ರಮವನ್ನು ನಡೆಸಿಕೊಡಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)