ಲೈಫ್ & ಸ್ಟೈಲ್

ಹಾರ್ಟ್ ಫೇಲ್ಯೂರ್ ಮೊದಲೇ ಸಿಗಲಿದೆ ಸೂಚನೆಗಳು

ಶರೀರದ ಅತಿಮುಖ್ಯ ಅಂಗ ಹೃದಯ. ಅದನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಹೃದಯ ತನ್ನ ಕೆಲಸ ನಿಲ್ಲಿಸಿಬಿಟ್ಟರೆ ಅಲ್ಲಿಗೆ ಜೀವನ ಮುಗಿಯಿತು. ಹಾರ್ಟ್ ಫೇಲ್ಯುವರ್ ಆಗಿದೆ ಅಂದರೆ ಅದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಅಂತಲೇ ಅರ್ಥ. ಆದರೆ ಇದು ಸಂಪೂರ್ಣ ನಿಜವಲ್ಲ. ಹೃದಯಕ್ಕೆ ರಕ್ತವನ್ನು ಪಂಪ್ ಮಾಡುವ ಶಕ್ತಿ ಕಡಿಮೆಯಾಗಿದೆ  ಎಂದರ್ಥ. ಹಾರ್ಟ್ ಫೇಲ್ಯುವರ್  ಆದ ತಕ್ಷಣ ಸಾಯಲ್ಲ. ಆದರೆ ಜೀವನ ಪರ್ಯಂತ ತೊಂದರೆ ಅನುಭವಿಸಬೇಕು. ಹಾರ್ಟ್ ಫೇಲ್ಯುವರ್ ಆಗುವ ಮುನ್ನ  15ದಿನಕ್ಕೂ ಮೊದಲು ಈ ಸೂಚನೆಗಳು ನಮಗೆ  ದೊರಕಲಿವೆ ಹಾಗಾದರೆ ಆ ಸೂಚನೆಗಳು ಯಾವುದು..? ಅದಕ್ಕಿಲ್ಲಿದೆ ಮಾಹಿತಿ.

heart-aayasaಆಯಾಸ: ರಕ್ತದಲ್ಲಿ ಆಮ್ಲಜನಕದ ಕೊರತೆ ಕಾಣಿಸಿಕೊಳ್ಳತೊಡಗುತ್ತದೆ. ಇದರಿಂದ ಆಯಾಸ ಮತ್ತು ಸುಸ್ತು ಕಾಣಿಸಿಕೊಳ್ಳಲಿದೆ.

heart-baditaಹೃದಯ ಬಡಿತ ಹೆಚ್ಚಳ : ಹೃದಯಕ್ಕೆ ಸರಿಯಾಗಿ ರಕ್ತ ಸರಬರಾಜಾಗದ ಕಾರಣ ಹೃದಯ ಬಡಿತ ಹೆಚ್ಚಳಗೊಳ್ಳಲಿದೆ.

heart_hasivuಹಸಿವಾಗದಿರುವುದು : ಹೃದಯದ ಮೂಲಕ ಸರಿಯಾದ ಪ್ರಮಾಣದಲ್ಲಿ ರಕ್ತ ಪಂಪಿಂಗ್ ಆಗದ ಕಾರಣ ಮೆದುಳಿಗೆ ಸರಿಯಾಗಿ ರಕ್ತ ಸರಬರಾಜಾಗುವುದಿಲ್ಲ. ಇದರಿಂದ ಮೆದುಳು ಹಸಿವಾಗುವ ಸೂಚನೆಯನ್ನು ನೀಡುವುದಿಲ್ಲ.

heart_baatukolluvikeಬಾತುಕೊಳ್ಳುವಿಕೆ : ಶರೀರದಲ್ಲಿ ಸರಿಯಾದ ಪ್ರಮಾಣದಲ್ಲಿ ರಕ್ತ ಸರಬರಾಜಾಗದ ಕಾರಣ ಮುಖ ಅಥವಾ ಪಾದ ಬಾತುಕೊಳ್ಳಲಾರಂಭಿಸುತ್ತದೆ.

heart-usiruಉಸಿರೆಳೆಯಲು ಕಷ್ಟ: ಶರೀರದಲ್ಲಿ ರಕ್ತದ ಚಲನೆ ಸರಿಯಾಗಿ ಆಗದ ಕಾರಣ ಲಂಗ್ಸ್ ಗಳಲ್ಲಿ ನೀರುತುಂಬಿಕೊಳ್ಳುತ್ತದೆ. ಇದರಿಂದ ಉಸಿರಾಡಲು ಕಷ್ಟವಾಗುತ್ತದೆ.

heart-kemmuಕಫ : ಲಂಗ್ಸ್ ನಲ್ಲಿ ನೀರು ತುಂಬಿಕೊಳ್ಳುವ ಕಾರಣ ಕಫ ಅಥವಾ ಕೆಮ್ಮಿನ ತೊಂದರೆಯುಂಟಾಗುತ್ತದೆ. ಇದು ಸಹ ಹಾರ್ಟ್ ಫೇಲ್ಯುವರ್ ಸೂಚನೆಯಾಗಿರಬಹುದು.

ಈ ಸೂಚನೆಗಳೇನಾದರೂ ಕಂಡು ಬಂದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ.

Leave a Reply

comments

Related Articles

error: