ಕರ್ನಾಟಕಪ್ರಮುಖ ಸುದ್ದಿ

ಧನಶ್ರೀ ಯೋಜನೆಯಡಿ ಆರ್ಥಿಕ ಸಹಾಯ : ಅರ್ಜಿ ಆಹ್ವಾನ

ಮಂಡ್ಯ (ನ.10): ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2018-19ನೇ ಸಾಲಿಗೆ “ಧನಶ್ರೀ” ಯೋಜನೆಯಡಿ ಹೆಚ್.ಐ.ವಿ. ಸೋಂಕಿತ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನಿಗಮದಿಂದ ಪ್ರತಿ ಫಲಾನುಭವಿಗೆ ರೂ.50,000/-, ರೂ.25,000/-ಗಳ ಸಾಲ ಹಾಗೂ ರೂ. 25,000/-ಗಳ ಸಹಾಯಧನ ಗಳ ಆರ್ಥಿಕ ಸೌಲಭ್ಯ ನೀಡಲಾಗುವುದು.

ಈ ಯೋಜನೆಯಡಿ ಸೌಲಭ್ಯ ಪಡೆಯಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರಳು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. ಅರ್ಜಿದಾರಳು 18 ರಿಂದ 60 ವರ್ಷದೊಳಗಿರಬೇಕು. ಅರ್ಜಿದಾರಳು ರಾಷ್ಟ್ರೀಕೃತ ಬ್ಯಾಂಕ್ ಖಾತೆಯನ್ನು ಹೊಂದಿದ್ದು ಚಾಲ್ತಿಯಲ್ಲಿರಬೇಕು ಮತ್ತು ಬ್ಯಾಂಕ್ ಖಾತೆಯೊಂದಿಗೆ ಅರ್ಜಿದಾರರ ಆಧಾರ್ ಲಿಂಕೇಜ್ ಆಗಿರುವ ಬ್ಯಾಂಕ್ ಖಾತೆ ಪುಸ್ತಕವನ್ನು ಸಲ್ಲಿಸಬೇಕು.

ಅರ್ಜಿದಾರಳು ಯಾವುದೇ ಆರ್ಥಿಕ ಸಂಸ್ಥೆ/ಬ್ಯಾಂಕುಗಳಲ್ಲಿ ಸಾಲ ಪಡೆದಿಲ್ಲ ಎಂಬ ಬಗ್ಗೆ ಧೃಡೀಕರಣ ಪತ್ರ ಸಲ್ಲಿಸುವುದು. ಕುಟುಂಬದಲ್ಲಿ ಹೆಚ್.ಐ.ವಿ. ಸೋಂಕಿತ ಒಬ್ಬ ಮಹಿಳೆಗೆ ಮಾತ್ರ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಅರ್ಜಿದಾರಳು ಹೆಚ್.ಐ.ವಿ. ಸೋಂಕಿತ ಕುರಿತು ಜಿಲ್ಲೆ/ತಾಲ್ಲೂಕು ಹತ್ತಿರದ ಆರೋಗ್ಯ ಕೇಂದ್ರದಲ್ಲಿನ ಐಸಿಟಿಸಿ/ಪಿಪಿಟಿಸಿಟಿ ಕೇಂದ್ರದ ವೈದ್ಯಕೀಯ ವರದಿಯನ್ನು ಹೊಂದಿರಬೇಕು. ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರಬೇಕು.

ಅರ್ಜಿಗಳನ್ನು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಿಂದ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗಳಿಗೆ ನವೆಂಬರ್ 23 ರೊಳಗೆ ದ್ವಿ ಪ್ರತಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಡ್ಯ ಹಾಗೂ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. (ಎನ್.ಬಿ)

Leave a Reply

comments

Related Articles

error: