ಕ್ರೀಡೆ

ಸತತ ಸೋಲುಗಳ ಮೇಲೆ ಸವಾರಿ ಮಾಡಿ ಗೆಲುವು ಪಡೆದ ಆಸಿಸ್

ಅಡಿಲೇಡ್‌ (ನ.10): ಆಸ್ಪ್ರೇಲಿಯಾ ಕೊನೆಗೂ ಸೋಲಿನ ಸರಪಳಿಯಿಂದ ಬಿಡಿಸಿಕೊಂಡಿದೆ. ಸತತ 7 ಏಕದಿನ ಪಂದ್ಯಗಳನ್ನು ಸೋತಿದ್ದ ಆಸೀಸ್‌, ಶುಕ್ರವಾರ ಕೊನೆಗೂ ಗೆಲುಲು ಕಂಡಿತು. ದ.ಆಫ್ರಿಕಾ ವಿರುದ್ಧ ಇಲ್ಲಿ ನಡೆದ 3 ಪಂದ್ಯಗಳ ಸರಣಿಯ 2ನೇ ಪಂದ್ಯದಲ್ಲಿ 7 ರನ್‌ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಆಸ್ಪ್ರೇಲಿಯಾ 48.3 ಓವರ್‌ಗಳಲ್ಲಿ 231 ರನ್‌ಗಳಿಗೆ ಆಲೌಟ್‌ ಆಯಿತು. ಇದಕ್ಕುತ್ತರವಾಗಿ ಬ್ಯಾಟ್‌ ಮಾಡಿದ ದ. ಆಫ್ರಿಕಾ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 224 ರನ್‌ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಆಯರೋನ್‌ ಫಿಂಚ್‌ (41), ಕ್ರಿಸ್‌ ಲಿನ್‌ (44), ಅಲೆಕ್ಸ್‌ (47) ರನ್‌ಗಳಿಸಿ ಆಸ್ಪ್ರೇಲಿಯಾ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ಇನ್ನುಳಿದ ಬ್ಯಾಟ್ಸ್‌ಮನ್‌ಗಳು ನೀರಸ ಪ್ರದರ್ಶನ ತೋರಿದರು. ಆಫ್ರಿಕಾ ಪರ ವೇಗಿ ರಬಾಡ 4, ಪ್ರಿಟೋರಿಯಸ್‌ 3 ವಿಕೆಟ್‌ ಪಡೆದು ಮಿಂಚಿದರು.

ಗುರಿ ಬೆನ್ನಟ್ಟಿದ ಆಫ್ರಿಕಾ, ಆಸೀಸ್‌ ಬೌಲರ್‌ಗಳ ಬಿಗುವಿನ ದಾಳಿಗೆ ರನ್‌ ಗಳಿಸಲು ಪರದಾಡಿತು. ನಾಯಕ ಫಾಫ್‌ ಡು ಪ್ಲೆಸಿ (47), ಡೇವಿಡ್‌ ಮಿಲ್ಲರ್‌ (51) ಹೊರತುಪಡಿಸಿದರೆ ಉಳಿದ ಆಟಗಾರರಿಂದ ಹೋರಾಟ ಕಂಡುಬರಲಿಲ್ಲ. ಆಸ್ಪ್ರೇಲಿಯಾ ಪರ ಮಾರ್ಕಸ್‌ ಸ್ಟೋಯ್ನಿಸ್‌ 3, ಜೋಶ್‌ ಹೇಜಲ್‌ವುಡ್‌, ಮಿಚೆಲ್‌ ಸ್ಟಾರ್ಕ್ ತಲಾ 2 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಆಸ್ಪ್ರೇಲಿಯಾ 231/10, (ಅಲೆಕ್ಸ್‌ 47, ಲಿನ್‌ 44, ರಬಾಡ 4-54);  ದಕ್ಷಿಣ ಆಫ್ರಿಕಾ 224/9, (ಮಿಲ್ಲರ್‌ 51, ಡು ಪ್ಲೆಸಿ 47, ಸ್ಟೋಯ್ನಿಸ್‌ 3-35).

(ಎನ್.ಬಿ)

Leave a Reply

comments

Related Articles

error: