ಪ್ರಮುಖ ಸುದ್ದಿ

ಸಿ.ಎಂ. ಕುಮಾರಸ್ವಾಮಿ ನಾಪತ್ತೆ ಎಂದು ಟ್ವೀಟ್ ಮಾಡಿದ ಬಿಜೆಪಿ!

ಬೆಂಗಳೂರು (ನ.11): ರಾಜ್ಯದ ಸಮ್ಮಿಶ್ರ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ಟಿಪ್ಪು ಜಯಂತಿ ಬಗ್ಗೆ ಬಿಜೆಪಿ ವ್ಯಂಗ್ಯ ಮಾಡಿದೆ. ಟಿಪ್ಪು ಜಯಂತಿ ಸರ್ಕಾರದ ಆಚರಣೆ ಮಾಡಲಾಗುತ್ತಿದೆಯಾದರೂ, ಸ್ವತಃ ಸಿಎಂ ಕುಮಾರಸ್ವಾಮಿ ವಿಶ್ರಾಂತಿ ನೆಪದಲ್ಲಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವುದಕ್ಕೆ ಬಿಜೆಪಿ ಲೇವಡಿ ಮಾಡಿದೆ.

‘ಸಿಎಂ ಕುಮಾರಸ್ವಾಮಿ ನಾಪತ್ತೆ! ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿರುವಾಗ ಸ್ವತಃ ಸಿಎಂ ನಾಪತ್ತೆ. ಸ್ವತಃ ಸಿಎಂ ಸಾಹೇಬರೇ ಕಾರ್ಯಕ್ರಮಕ್ಕೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿರುವಾಗ, ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದಕ್ಕೆ ಅರ್ಥವೇನು? ವೋಟ್ ಬ್ಯಾಂಕ್ ಗಾಗಿ ಒಬ್ಬ ಸಾಮೂಹಿಕ ಕೊಲೆಗಾರನನ್ನು ವೈಭವೀಕರಿಸುತ್ತಿರುವ ಸರ್ಕಾರದ ಮನಸ್ಥಿತಿ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ’ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿ ವ್ಯಂಗ್ಯ ಮಾಡಿದೆ. (ಎನ್.ಬಿ)

Leave a Reply

comments

Related Articles

error: