ಪ್ರಮುಖ ಸುದ್ದಿಮೈಸೂರು

ನ.21 ರಿಂದ ಅಖಿಲ ಭಾರತೀಯ ಮುಕ್ತ ಚದುರಂಗ ಪಂದ್ಯಾವಳಿ

ಹದಿನೈದು ವರ್ಷದೊಳಗಿನವರಿಗೆ : ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ

ಮೈಸೂರು,ನ.10 : ಕರ್ನಾಟಕ ಚದುರಂಗ ಸಂಘ, ಅಖಿಲ ಭಾರತೀಯ ಚದುರಂಗ ಸಂಘ ಹಾಗೂ ಮೈಸೂರು ಚದುರಂಗ ಸಂಸ್ಥೆ ಸಂಯುಕ್ತವಾಗಿ ‘ಆಲ್ ಇಂಡಿಯಾ ಅಂಡರ್ 15 ‍ಫೀಡೆ ಮುಕ್ತ ಚದುರಂಗ ಮುಕ್ತ ಪಂದ್ಯಾವಳಿ ಅನ್ನು ನ.21 ರಿಂದ 25ರವರೆಗೆ ನಡೆಸಲಾಗುವುದು.

ಹದಿನೈದು ವರ್ಷದೊಳಗೆ ನಡೆಯುತ್ತಿರುವ ಈ ಟೂರ್ನ್ ಮೆಂಟ್ ಅನ್ನು ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಆಯೋಜಿಸಿದ್ದು, ದೇಶದಾದ್ಯಂತ 300 ಜನ ಚದುರಂಗ ಪಟುಗಳು ಭಾಗಿಯಾಗುತ್ತಿದ್ದು ಸುಮಾರು 2,50 ಲಕ್ಷ ರೂ.ಗಳ ವರೆಗೆ ಸುಮಾರು 30 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಮೈಸೂರು ಚೆಸ್ ಕ್ಲಬ್ ನ ಉಪಾಧ್ಯಕ್ಷ ನಾಗೇಂದ್ರ ಮುರಳೀಧರ್ ತಿಳಿಸಿದರು.

ಮೈಸೂರು ವಿವಿಯ ಜಿಮ್ಯಾನ್ಷಿಯಂ ಹಾಲ್ ನಲ್ಲಿ  ನಡೆಯುವ ಈ ಪಂದ್ಯಾವಳಿಗೆ 21 ರಂದು 9 ಗಂಟೆಗೆ ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸದಸ್ಯರಾದ ಎಂ.ಆರ್.ಜಯರಾಂ ಉದ್ಘಾಟಿಸಲಿದ್ದು, ರಾಜ್ಯ ಯುವ ಕಮಿಷನರ್ ಕೆ.ಶ್ರೀನಿವಾಸ್ , ಜಿ.ಪಂ. ಸಿಇಓ ಜ್ಯೋತಿ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ದಿ.25ರಂದು ಸಮಾರೋಪ ಹಾಗೂ ಬಹುಮಾನ ವಿತರಣೆಯನ್ನು ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಐದು ದಿನಗಳ ಕಾಲ ಬೆಳಗ್ಗೆ 11 ರಿಂದ ಪಂದ್ಯಾವಳಿ ಆರಂಭವಾಗಲಿದೆ. ಒಟ್ಟು 8 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಎಲ್ಲಾ ಪಂದ್ಯಗಳು ಸ್ವಿಸ್ ಲೀಗ್ ಮಾದರಿಯಲ್ಲಿ ನಡೆಯಲಿದೆ. ಒಟ್ಟು9 ಸುತ್ತಿನಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಾಗುತ್ತದೆ ಎಂದರು.

ಪಂದ್ಯಾವಳಿಯಲ್ಲಿ ಭಾಗವಹಿಲಿಚ್ಚಿಸುವವರು ನ.15ರೊಳಗೆ www.mysorechessclub.com. [email protected]. ಹೆಸರು ನೊಂದಾಯಿಸಿಕೊಳ್ಳಬಹುದಾಗಿದ್ದು, 1250ರೂ. ಪ್ರವೇಶ ದರವನ್ನು ನಿಗದಿಗೊಳಿಸಲಾಗಿದ್ದು, ಮೈಸೂರು ಚೆಸ್ ಕ್ಲಬ್, ಅಕೌಂಟ್ ನಂ. 17051010003514, ಸಿಂಡಿಕೇಟ್ ಬ್ಯಾಂಕ್, ಬ್ರಾಂಚ್ ಕೋಡ್ 001705, ಐಎಫ್ ಎಸ್ ಸಿ ಕೋಡ್ sysb0001705 ಆಗಿದೆ,  ಎಂದು ತಿಳಿಸಿದರು.

ಮೈಸೂರು ಚೆಸ್ ಕ್ಲಬ್ ನ ಸಿ.ಕೆ.ಮುರಳೀಧರನ್, ಗೌರವಾಧ್ಯಕ್ಷ ಹೆಚ್.ಜಿ. ಶ್ರೀವರ, ಜಿಲ್ಲಾ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ಲಾ. ಜಗನ್ನಾಥ್, ಕಾರ್ಯದರ್ಶಿ ಜಯ್ ಪ್ರಕಾಶ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: