ಮೈಸೂರು

ಪೂಜಾರಿ ಹೇಳಿಕೆಗೆ ದಿನೇಶ್ ಗುಂಡೂರಾವ್ ಬೇಸರ

ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆ ಎಂಬ ಜನಾರ್ಧನ ಪೂಜಾರಿ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಾಕ್ಷ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಕಾಂಗ್ರೆಸ್ ಸಮಾವೇಶಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪೂಜಾರಿಯವರು ಇಂತಹ ಹೇಳಿಕೆ ನಿಡುವುದು ಅವರ ವಯಸ್ಸಿಗೆ ಶೋಭೆ ತರುವುದಿಲ್ಲ. ಪೂಜಾರಿಯವರ ಕುರಿತು ಈಗಾಗಲೇ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಮುಂದಿನ ನಿರ್ಧಾರವನ್ನು ಅವರೇ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಅವರು ಪದೇ ಪದೇ ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಅವರು ತುಂಬಾ ದೊಡ್ಡ ನಾಯಕರಾಗಿದ್ದು ಅವರ ಜೊತೆ ನಾನು ಮಾತನಾಡಲು ಆಗುವುದಿಲ್ಲ. ಅವರು ಸ್ಪಷ್ಟವಾಗಿ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಯಾವುದೇ ರೀತಿಯ ವಿಮರ್ಶೆ ಮಾಡಲು ಆಗುವುದಿಲ್ಲ. ಏನಾದರೂ ಹೇಳುವುದಿದ್ದರೇ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಲಿ ಎಂದರು.

ನಂಜನಗೂಡಿಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ವೀಕ್ಷಕರನ್ನು ಕಳುಹಿಸಲಾಗಿದೆ. ಅವರಿಂದ ವರದಿ ಬಂದ ನಂತರ ಸಿಎಂ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಜೊತೆಯಲ್ಲಿ, ನಮ್ಮದೇ ಪಕ್ಷದವರು ಅಥವಾ ಬೇರೆ ಪಕ್ಷದಿಂದ ಬಂದವರು ಅಭ್ಯರ್ಥಿ ಆಗುತ್ತಾರೇ ಅಂತ ಈಗಲೇ ಹೇಳಲಾಗುವುದಿಲ್ಲ.  ಒಟ್ಟಿನಲ್ಲಿ ಚುನಾವಣೆಗೆ ಸಿದ್ದತೆ ನಡೆದಿದ್ದು ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು.

Leave a Reply

comments

Related Articles

error: