ಪ್ರಮುಖ ಸುದ್ದಿಮೈಸೂರು

ಆಚರಣೆಗಳನ್ನು ವಿರೋಧಿಸುವವರೇ ನಿಜವಾದ ಮತಾಂಧರು : ಬಿಜೆಪಿ ವಿರುದ್ಧ ಹರಿಹಾಯ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು,ನ.10:- ಆಚರಣೆಗಳನ್ನು ವಿರೋಧಿಸುವವರೇ ನಿಜವಾದ ಮತಾಂಧರು, ಕೋಮುವಾದಿಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಮೈಸೂರಿನ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಮತಾಂಧ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದರು. ಬಿಜೆಪಿ ಮಂದಿ ಕೋಮುವಾದಿಗಳು.ಮತಾಂಧ ಅಂದ್ರೆ ಏನು..? ಆಚರಣೆಗಳನ್ನು ವಿರೋಧಿಸುವವರೇ ನಿಜವಾದ ಮತಾಂಧರು. ಕೋಮುವಾದಿಗಳು. ಹಾಗಿದ್ದರೆ ಕೋಮುವಾದಿಗಳು ಯಾರು ಬಿಜೆಪಿ ಮಂದಿ ಎಂದರು.

ಎಲ್ಲಾ ಧರ್ಮವನ್ನೂ ಪ್ರೀತಿಸುವವರೇ ಹಿಂದೂಗಳು. ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ಹಿಂದೂಗಳು ಸರ್ವಧರ್ಮ ಸಹಿಷ್ಣುಗಳು. ಟಿಪ್ಪು ಜಯಂತಿ ವಿರೋಧಿಸುವವರು ಹಿಂದುಗಳಾ? ಪ್ರತಾಪ್ ಸಿಂಹ, ಅನಂತ ಕುಮಾರ್, ನಳೀನ್ ಕುಮಾರ್ ಕಟೀಲ್ ಈ ಮೂವರಿಗೂ ಮಾತಿನ ಮೇಲೆ ಪ್ರಜ್ಞೆ ಇಲ್ಲ. ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿತ್ತು. ಈಗ ಟಿಪ್ಪು ಜಯಂತಿ ಯಶಸ್ವಿಯಾಗಿದೆ.ಕೆಲವರು ಟಿಪ್ಪು ಜಯಂತಿ ವಿರೋಧಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: