ಮೈಸೂರು

ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿ ಕಾರ್ಯಾಗಾರ; ಜ.7ರಿಂದ 11ರ ವರೆಗೆ

ನೈಸರ್ಗಿಕ ಕೃಷಿಗೆ ಒತ್ತು ನೀಡಿ, ಪ್ರಕೃತಿ ಹಾಗೂ ಭೂಮಿಯಲ್ಲಿ ಲಭ್ಯವಾಗುವ ವಸ್ತುಗಳಿಂದಲೇ ಗೊಬ್ಬರ ತಯಾರಿಸಿ ಸಮೃದ್ಧ ಬೆಳೆ ಬೆಳೆಯಲು ರೈತರಿಗೆ ‘ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ’ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ನೈಸರ್ಗಿಕ ಕೃಷಿಕ ಅವಿನಾಶ್ ತಿಳಿಸಿದರು.

ಸೋಮವಾರ, ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.7 ರಿಂದ 11ರ ವರೆಗೆ ಚಿತ್ರದುರ್ಗದ ಶ್ರೀಮುರುಘಾಮಠದಲ್ಲಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಅಮೃತಭೂಮಿ ಅಂತರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರ ಹಾಗೂ ಉಳುಮೆ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ನೈಸರ್ಗಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿರುವರು ಎಂದು ತಿಳಿಸಿದರು.

ವಿಷಕಾರಿ ರಸಾಯನಿಕ ಗೊಬ್ಬರದಿಂದ ಭೂಮಿಯೂ ಫಲವತ್ತತ್ತೆ ಕಳೆದುಕೊಂಡಿದೆ. ಅರಣ್ಯ ನಾಶದಿಂದ ಅಂತರ್‍ ಜಲ ಕುಸಿದಿದೆ. ಬೆಳೆ ನಷ್ಟಕ್ಕೆ ಹಲವಾರು ಅವೈಜ್ಞಾನಿಕ ಪದ್ಧತಿಯೇ ಕಾರಣವಾಗಿವೆ. ಆದ್ದರಿಂದ ನಮ್ಮಲ್ಲಿಯೇ ಲಭ್ಯವಿರುವ ವಸ್ತುಗಳನ್ನು ಬಳಸಿ ಗೊಬ್ಬರ ತಯಾರಿಸುವ ವಿಧಾನ, ಏಕಬೆಳೆ ಪದ್ಧತಿಯಿಂದ ಹೊರಬಂದು ಬಹುಬೆಳೆ ಪದ್ಧತಿ ಅಳವಡಿಸಿಕೊಂಡಲ್ಲಿ ನಿಶ್ಚಿತ ಆದಾಯ ಪಡೆಯುವ ವಿಧಾನದ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದು ಎಂದು ಕಾರ್ಯಾಗಾರದ ಮೂಲೋದ್ದೇಶಗಳನ್ನು ತಿಳಿಸಿದರು.

imagesಮೈಸೂರಿನಲ್ಲಿ ನೈಸರ್ಗಿಕ ಕೃಷಿಕರು ವಿವಿಧೆಡೆ ಹಂಚಿಹೋಗಿದ್ದು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿ, ಕಾರ್ಯಾಗಾರದಲ್ಲಿ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಸುಮಾರು 2 ಸಾವಿರ ಕೃಷಿಕರು ಪಾಲ್ಗೊಳ್ಳುವರು ಎಂದರು.

ರೈತ ಮುಖಂಡ ಹೊಸಕೋಟೆ ಬಸವರಾಜು ಮಾತನಾಡಿ, ಬೆಳೆನಷ್ಟ ಅನುಭವಿಸಿದ ರೈತರಿಗೆ ಸರ್ಕಾರದ ಪ್ರೋತ್ಸಾಹವಿಲ್ಲದೆ ಹತಾಶೆಯಿಂದ ಆತ್ಮಹತ್ಯೆ ದಾರಿ ಹಿಡಿಬೇಕೆನ್ನುವವರಿಗೆ ನೈಸರ್ಗಿಕ ಕೃಷಿ ಪದ್ಧತಿ ಆಶಾಕಿರಣವಾಗಿದೆ ಮತ್ತು ಆರೋಗ್ಯಯುತ ದವಸ-ಧಾನ್ಯ ಇದರಿಂದ ಲಭಿಸಲಿದೆ. ಈಗಾಗಲೇ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ರೈತರಿಗೆ ಎದುರಾಗುತ್ತಿರುವ ಗೊಂದಲಗಳಿಗೆ ಕಾರ್ಯಾಗಾರದಲ್ಲಿ ಸೂಕ್ತ ಸಲಹೆ-ಮಾರ್ಗದರ್ಶನ ನೀಡಲಾಗುವುದು ಎಂದರು.

ಪ್ರಗತಿಪರ ರೈತ ಅಭಿರುಚಿ ಗಣೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: