ಸುದ್ದಿ ಸಂಕ್ಷಿಪ್ತ

ಪ್ರೇಮ ಕವನ ಹಾಗೂ ಸಾಧಕರ ಸನ್ಮಾನ : ಆಹ್ವಾನ

ಮೈಸೂರು,ನ.10: ಪ್ರೇಮಕವಿ ಕೆ.ಎಸ್.ನ.105ನೇ ಜನ್ಮ ದಿನದ ಅಂಗವಾಗಿ ನೆನಪಿನ ರಾಜ್ಯಮಟ್ಟದ ಪ್ರೇಮಕವನ ಸ್ಪರ್ಧೆ ‘ಪ್ರೇಮ ಕವನಗಳ’ ಸ್ಪರ್ಧೆಯನ್ನ ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ ಏರ್ಪಡಿಸಲಾಗಿದೆ.

ಕವನ ಸ್ಪರ್ಧೆಗೆ ಆಸಕ್ತ ಕವಿಗಳು, ತಮ್ಮ ಎರಡು ಸ್ವರಚಿತ ಪ್ರೇಮ ಕವನಗಳನ್ನು ಸ್ವ ವಿಳಾಸವುಳ್ಳ ಪತ್ರದೊಂದಿಗೆ, ನ.30ರೊಳಗೆ ತಲುಪಿಸಬೇಕು.

ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಅರ್ಜಿ ಆಹ್ವಾನ : ಸಂಸ್ಥೆಯ 34ನೇ ವಾರ್ಷಿಕೋತ್ಸವ ಅಂಗವಾಗಿ ಕನ್ನಡ ನಾಡು-ನುಡಿ ಕಲೆ ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ ಸಾಧಕರಿಗೆ ರಾಜ್ಯಮಟ್ಟದ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ನೀಡಲಿದ್ದು ಅರ್ಹರು ತಮ್ಮ ಬಯೋಡಾಟ, ದಾಖಲೆಗಳೊಂದಿಗೆ ನ.30ರೊಳಗೆ  ಡಾ.ಭೇರ್ಯ ರಾಮಕುಮಾರ್, ಅಧ್ಯಕ್ಷರು, ಗ್ರಾಮಾಂತರ ಬುದ್ಧಿಜೀವಿಗಳ ಬಳಗ, ಅರ್ಕೇಶ್ವರನಗರ ಬಡಾವಣೆ, ಕೆ.ಆರ್.ನಗರ. ಮೈಸೂರು ಜಿಲ್ಲೆ ಇಲ್ಲಿಗೆ .ತಲುಪಿಸಬೇಕೆಂದು ಕೋರಲಾಗಿದೆ. ವಿವರಗಳಿಗೆ ಮೊ.ಸಂ. 9449680583 ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: