ಮೈಸೂರು

ಆದಿವಾಸಿಗಳ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ; ಆರ್ಥಿಕ ಸ್ಥಿರತೆ ಒದಗಿಸುತ್ತಿರುವ ಲ್ಯಾಂಪ್ಸ್ ಸಹಕಾರ ಮಹಾಮಂಡಳ

ಸೀಗೆಕಾಯಿ, ಅಂಟುವಾಳ, ಬೆಟ್ಟದ ನೆಲ್ಲಿಕಾಯಿ, ಗೋಂದು, ಜೇನುತುಪ್ಪ, ಮರದಪಾಚಿ ಸೇರಿದಂತೆ ಲಭ್ಯವಿರುವ ಕಿರು ಅರಣ್ಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿ ಆದಿವಾಸಿಗಳ ಆರ್ಥಿಕ ಸ್ಥಿರತೆಗೆ ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳವೂ ಶ್ರಮಿಸುತ್ತಿದೆ ಎಂದು ಅಧ್ಯಕ್ಷ ಕೃಷ್ಣಯ್ಯ ತಿಳಿಸಿದರು.

ಸೋಮವಾರ, ಪತ್ರಕರ್ತರ ಭವನದಲ್ಲಿ ಮಹಾಮಂಡಳದ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕಳೆದ ಮೂರು ವರ್ಷಗಳಿಂದಲೂ ಮಹಾಮಂಡಳವೂ ಲಾಭದಲ್ಲಿದೆ. 2016ನೇ ಸಾಲಿನಲ್ಲಿ 4.25 ಲಕ್ಷ ರೂ.ಗಳ ಸಂಘದ ಷೇರು, 3 ಲಕ್ಷ ರೂ.ಗಳ ಸರ್ಕಾರದ ಷೇರು ಹಾಗೂ ಇತರೆ ಮೂಲಗಳ ಷೇರು ಸೇರಿದಂತೆ 10 ಲಕ್ಷ ರೂಪಾಯಿ ಮಂಜೂರಾಗಿದ್ದು ಈ ಪೈಕಿ 9 ಲಕ್ಷ ರೂಪಾಯಿ ಸರ್ಕಾರಕ್ಕೆ ಮರುಪಾವತಿಸಲಾಗಿದೆ. ಅಲ್ಲದೇ 2015-16ನೇ ಸಾಲಿನಲ್ಲಿ 21.38 ಲಕ್ಷ ರೂಪಾಯಿ ಲಾಭ ಪಡೆದಿದೆ ಎಂದು ಮಹಾಮಂಡಳದ ವಾರ್ಷಿಕ ವಹಿವಾಟಿನ ಸಂಕ್ಷಿಪ್ತ ನೋಟವನ್ನು ವಿವರಿಸಿದರು.

ಆದಿವಾಸಿಗಳಿಂದ ಖರೀದಿಸಿದ ಕಿರು ಅರಣ್ಯ ಉತ್ಪನ್ನಗಳನ್ನು ಸಂಸ್ಕರಿಸಿ ಮಹಾಮಂಡಳವೇ ನೇರ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿ ಆದಿವಾಸಿಗಳನ್ನು ಸ್ವಾವಲಂಬನೆಗೊಳಿಸುತ್ತಿದೆ ಎಂದು ತಿಳಿಸಿದರು.

ವ್ಯವಸ್ಥಾಪಕ ನಿರ್ದೇಶಕಿ ವನಜಾಕ್ಷಿ, ಉಪಾಧ್ಯಕ್ಷ ಮುದ್ದಯ್ಯ ಅವರು ದಿನದರ್ಶಿಕೆ ಬಿಡುಗಡೆ ಸಂದರ್ಭ ಉಪಸ್ಥಿತರಿದ್ದರು.

Leave a Reply

comments

Related Articles

error: