ಮೈಸೂರು

ಜೆ.ಕೆ. ಟೈರ್ಸ್ ಹಿಂದುಳಿದ ಅಲ್ಪಸಂಖ್ಯಾತ ಉದ್ಯೋಗಿಗಳ ಸಂಘದ ದಿನದರ್ಶಿಕೆ ಬಿಡುಗಡೆ

ಜೆ.ಕೆ. ಟೈರ್ಸ್ ಹಿಂದುಳಿದ ಅಲ್ಪಸಂಖ್ಯಾತ ಉದ್ಯೋಗಿಗಳ ಸಂಘದ 2017ರ ಹೊಸ ವರ್ಷದ ದಿನದರ್ಶಿಕೆಯನ್ನು ಸೋಮವಾರ ಪತ್ರಕರ್ತರ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿ ಮೆಹಬೂಬ್, ಸಂಘವು ಕಳೆದ 8 ವರ್ಷಗಳಿಂದಲೂ ಕಾರ್ಮಿಕರ ಪರವಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಹಾಗೂ ನಾಡು-ನುಡಿಗಾಗಿ ಚಳವಳಿ ಹೋರಾಟಗಳಲ್ಲಿ ಭಾಗವಹಿಸಿ ಸಾಮಾಜಿಕ ಬದ್ಧತೆಯನ್ನು ಮೆರೆಯುತ್ತಿದೆ. ಸಂಘದ ನೌಕರರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ನಡೆಸುತ್ತಿದೆ. ರಾಜ್ಯೋತ್ಸವ ಹಾಗೂ ಇತರೆ ವಿಶೇಷ ದಿನಗಳನ್ನು ವೃದ್ಧಾಶ್ರಮ ಹಾಗೂ ಅನಾಥಾಶ್ರಮದ ಮಕ್ಕಳಿಗೆ ಅವಶ್ಯ ವಸ್ತುಗಳನ್ನು ಪೂರೈಸುವುದರೊಂದಿಗೆ ಆಚರಿಸಲಾಗುತ್ತಿದೆ ಎಂದು ಸಂಘದ ಕಾರ್ಯ ವೈಖರಿ, ಸಾಮಾಜಿಕ ಕಳಕಳಿಯ ಬಗ್ಗೆ ತಿಳಿಸಿದರು.

ದಿನದರ್ಶಿಕೆ ಬಿಡುಗಡೆ ವೇಳೆ ಅಧ್ಯಕ್ಷ ಮುರಳಿಧರ್, ಗೌರವ ಕಾರ್ಯದರ್ಶಿ ಆನಂದ್ ರಾವ್, ಉಪಾಧ್ಯಕ್ಷ ಮಹದೇವ್, ಖಜಾಂಚಿ ಚೌಡಯ್ಯ, ಸಹ ಕಾರ್ಯದರ್ಶಿ ಪ್ರವೀಣ್, ಉಪಸ್ಥಿತರಿದ್ದರು.

Leave a Reply

comments

Related Articles

error: