ಸುದ್ದಿ ಸಂಕ್ಷಿಪ್ತ

ನ. 13 ರಿಂದ 15 ರವರೆಗೆ ಕ್ಯಾಲಿಗ್ರಫಿ ಪ್ರದರ್ಶನ

ರಾಜ್ಯ(ಮಡಿಕೇರಿ)ನ.12:- ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನ. 13 ರಿಂದ 15 ರವರೆಗೆ ಕ್ಯಾಲಿಗ್ರಫಿ ಪ್ರದರ್ಶನ ಆಯೋಜಿಸಲಾಗಿದೆ.

ಜ್ಯೋತಿ ಕ್ಯಾಲಿಗ್ರಫಿ ತರಗತಿ ವತಿಯಿಂದ  ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ಬಳಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ  ನ.13 ರಂದು ಮಂಗಳವಾರ ಸಂಜೆ 4.30 ಗಂಟೆಗೆ ಆಯೋಜಿತವಾಗಿರುವ  ಕ್ಯಾಲಿಗ್ರಫಿ ಪ್ರದರ್ಶನದಲ್ಲಿ  ಹಲವಾರು ವಿದ್ಯಾರ್ಥಿಗಳು ಸುಂದರ ಅಕ್ಷರ ನಮೂನೆಗಳನ್ನು ಪ್ರದರ್ಶಿಸಲಿದ್ದಾರೆ.

ಪ್ರದರ್ಶನವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಮಮ್ತಾಜ್  ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಉದ್ಘಾಟಿಸಲಿದ್ದಾರೆ.  ಕ್ಯಾಲಿಗ್ರಫಿ ಪ್ರದರ್ಶನ ನ. 14 ಮತ್ತು 15 ರಂದು  ಬೆಳಗ್ಗೆ 11 ರಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರುತ್ತದೆ ಎಂದು ಜ್ಯೋತಿ ಕ್ಯಾಲಿಗ್ರಫಿ ಕೇಂದ್ರದ ಮುಖ್ಯಸ್ಥೆ ನಮಿತಾ ರಾವ್ ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: