ಮೈಸೂರು

ಸೈಕಲ್ ಪ್ಯೂರ್ ಅಗರ ಬತ್ತೀಸ್ ನ ಬ್ರಾಂಡ್ ರಾಯಭಾರಿಯಾಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಮುಂದುವರಿಕೆ

ಮೈಸೂರು,ನ.12:-  ವಿಶ್ವದ ಶುದ್ಧ ಮತ್ತು ಏಕೈಕ ಪ್ರಮಾಣೀಕೃತ ಅಗರಬತ್ತಿ ತಯಾರಕರಾದ ಸೈಕಲ್ ಪ್ಯೂರ್‍ಅಗರಬತ್ತೀಸ್,  ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‍ ಅವರನ್ನು ಮತ್ತೆ2 ವರ್ಷಗಳ ಕಾಲ ತಮ್ಮ ಬ್ರಾಂಡ್‍ನ ರಾಯಭಾರಿಯನ್ನಾಗಿ ಮುಂದುವರೆಸಿದೆ. ಅಮಿತಾಬ್  ಬಚ್ಚನ್‍ ಅವರು ಕಳೆದ 3 ವರ್ಷಗಳಿಂದ ಭಾರತದಾದ್ಯಂತ ಸೈಕಲ್ ಪ್ಯೂರ್‍ಅಗರಬತ್ತೀಸ್ ಉತ್ಪನ್ನಗಳನ್ನು ಮತ್ತುಅದರೊಂದಿಗಿನ ಧಾರ್ಮಿಕತೆಯನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಸಹಭಾಗಿತ್ವವು ಗ್ರಾಹಕರ ಮೇಲೆ ಬಲವಾದ ಪರಿಣಾಮವನ್ನು ಬೀರಿದೆ. ಬ್ರಾಂಡ್‍ನೊಂದಿಗೆ ಒಂದು ಪರಿಶುದ್ಧ ಸಂಪರ್ಕವನ್ನು ಸ್ಥಾಪಿಸುವಲ್ಲಿ ನೆರವಾಗಿದೆ.

ಈ ನವೀಕೃತ ಸಹಯೋಗದೊಂದಿಗೆ, ಸೃಜನಾತ್ಮಕ ಅಭಿಯಾನದ ಸರಣಿಗಳ ಮೂಲಕ, ಬ್ರಾಂಡ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಮತ್ತು ಹೊಸ ಗ್ರಾಹಕರ ಹೃದಯ ಮತ್ತು ಮನಸ್ಸುಗಳಲ್ಲಿ ತನ್ನ ಮಾರ್ಗವನ್ನು ಸೃಷ್ಟಿಸಿಕೊಳ್ಳಲು ಉದ್ದೇಶಿಸಿದೆ. ಅಭಿವೃದ್ಧಿಪರ ಯೋಜನೆಗಳನ್ನು ವಿವರಿಸಿದ ಸೈಕಲ್ ಪ್ಯೂರ್‍ಅಗರಬತ್ತೀಸ್‍ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್‍ರಂಗ, ` ಅಮಿತಾಬ್ ಬಚ್ಚನ್‍ ಅವರು ಪ್ರಾಮಾಣಿಕತೆ, ಪಾರದರ್ಶಕತೆ, ನೈತಿಕತೆ ಮತ್ತು ಸಮರ್ಪಣೆಗಳ ಸಾಕಾರವಾಗಿದ್ದಾರೆ. ಸೈಕಲ್ ಪ್ಯೂರ್‍ಅಗರಬತ್ತೀಸ್ ಸಹ ಇದೇ ಮೌಲ್ಯಗಳನ್ನು ಪ್ರತಿನಿಧಿಸುತ್ತಿದ್ದು, ಇದೇ ಕಾರಣಕ್ಕೆ ಅವರು ಸೈಕಲ್ ಪ್ಯೂರ್ ಬ್ರಾಂಡ್‍ನ ಸಮರ್ಥ ರಾಯಭಾರಿಯಾಗಿದ್ದಾರೆ. ಕಠಿಣ ಕೆಲಸ ಮತ್ತು ನಿರಂತರ ವೃತ್ತಿಜೀವನದ ನಾವೀನ್ಯತೆಗಳ ಕುರಿತು ಅವರಿಗಿರುವ ಬದ್ಧತೆಯನ್ನು ನಾವು ನಮ್ಮ ಗ್ರಾಹಕರ ಮನಸ್ಸಿನಲ್ಲಿ ಮೂಡಿಸುವ ಆಶಾವಾದ ಹೊಂದಿದ್ದೇವೆ.  ಅಮಿತಾಬ್ ಅವರನ್ನುಇಡೀ ರಾಷ್ಟ್ರವೇ ಗೌರವಿಸುತ್ತದೆ, ಇಂತಹ ಶ್ರೇಷ್ಠ ವ್ಯಕ್ತಿಯೊಂದಿಗಿನ ಸಹಯೋಗವು ದೇಶದಾದ್ಯಂತ ನಮ್ಮ ಗ್ರಾಹಕರೊಂದಿಗೆ ಅತ್ಯುತ್ತಮವಾದ ಬಂಧವನ್ನು ಸೃಷ್ಟಿಸಲು ನಮಗೆ ಯಾವಾಗಲೂ ನೆರವಾಗುತ್ತದೆ. ಈ ಹೆಮ್ಮೆಯ ಸಹಯೋಗದೊಂದಿಗೆ ಈ ಸಂಬಂಧವನ್ನು ಮುಂದುವರೆಸಲು ನಾವು ಉತ್ಸುಕರಾಗಿದ್ದೇವೆ’ ಎಂದು ಹೇಳಿದರು.

ಈ ಸಹಯೋಗದ ಬಗ್ಗೆ ಸಂತಸ ಹಂಚಿಕೊಂಡ ಅಮಿತಾಬ್ ಬಚ್ಚನ್, `ಭರವಸೆ ಮತ್ತು ನಂಬಿಕೆಯನ್ನು ಪೋಷಿಸುವ ಮೂಲಕ ಸೈಕಲ್ ಪ್ಯೂರ್‍ಅಗರಬತ್ತೀಸ್, ಸುಮಾರು 70 ವರ್ಷಗಳಿಂದ ಭಾರತದ ಉದ್ದಗಲಕ್ಕೂ ಧಾರ್ಮಿಕ ಪದ್ಧತಿಗಳ ಒಂದು ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿದೆ. ಇಂತಹ ಬಲವಾದ ತತ್ವಗಳನ್ನು ಮತ್ತು ಮೌಲ್ಯಗಳನ್ನು ಹೊಂದಿರುವ ಬ್ರಾಂಡ್‍ ಅನ್ನು ಪ್ರತಿನಿಧಿಸುವುದು ಒಂದು ಉತ್ತಮ ಅನುಭವವಾಗಿದೆ. ಆಲೋಚನಾ- ಕ್ರಮವನ್ನು ಪ್ರಚೋದಿಸುವ ನವೀನ ಬ್ರಾಂಡ್‍ ನ ಒಂದು ಭಾಗವಾಗಲು ಮತ್ತು ಅದರೊಂದಿಗಿನ ಸಹಯೋಗವನ್ನು ಮುಂದುವರೆಸಲು ನಮಗೆ ಹೆಮ್ಮೆ ಎನಿಸುತ್ತದೆ’ ಎಂದು ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: