ಪ್ರಮುಖ ಸುದ್ದಿ

ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಮಲ್ಲಿಕಾರ್ಜುನ ಖರ್ಗೆ ಸಂತಾಪ

ದೇಶ(ನವದೆಹಲಿ)ನ.12:-  ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಸಂಸತ್ತಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಅನಂತಕುಮಾರ್ ನಿಧನದಿಂದ ಭಾರತೀಯ ರಾಜಕೀಯ ಕ್ಷೇತ್ರ ಓರ್ವ  ಮೌಲ್ಯಾಧಾರಿತ ರಾಜಕಾರಣಿ ಹಾಗೂ ಅತ್ಯುತ್ತಮ ವಾಗ್ಮಿಯೊಬ್ಬನನ್ನು ಕಳೆದುಕೊಂಡಂತಾಗಿದೆ.  ಅವರು ಸಂಸದರಾಗಿ, ಕೇಂದ್ರ ಸಚಿವರಾಗಿ ದೇಶಕ್ಕೆ ನೀಡಿದ ಕೊಡುಗೆ ಆನನ್ಯ. ಪ್ರಸ್ತುತ ಸಂಸದೀಯ ಸಚಿವರಾಗಿದ್ದ ಅವರು ಸಂಸತ್ತಿನಲ್ಲಿ ಸದಾ ನಗುಮೊಗದೊಂದಿಗೆ ಉತ್ತರಿಸುವ ಮೂಲಕ ಸಂಸತ್ತಿನ ಒಳಗಡೆ ಕ್ರಿಯಾಶೀಲತೆ ಗುಣವನ್ನು ಬೆಳಸಿಕೊಂಡು ಗಮನ ಸೆಳೆದಿದ್ದರು.

ತಮ್ಮ ಜನಪರ ಕಾಳಜಿ, ಸದಾ ಕಾರ್ಯಚಟುವಟಿಕೆಗಳಿಂದಾಗಿ ಕರ್ನಾಟಕದ ಜನತೆಯ ಕಣ್ಮಣಿ ಆಗಿದ್ದರು ಎಂದು ಮಲ್ಲಿಕಾರ್ಜುನ ಖರ್ಗೆ ಸ್ಮರಿಸಿದ್ದಾರೆ.

ದೇವರು ಅವರ ಆತ್ಮಕ್ಕೆ ಚಿರ ಶಾಂತಿಯನ್ನು ದಯಪಾಲಿಸಲಿ. ಅವರ ಕುಟುಂಬ ವರ್ಗಕ್ಕೆ  ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯನ್ನು ಸಹಿಸುವ ಶಕ್ತಿ ನೀಡಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: