ಮೈಸೂರು

ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನದಿಂದ ಪಕ್ಷಕ್ಕೆ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟ : ಡಾ. ಮಂಜುನಾಥ್ ಬಿ ಹೆಚ್ ಕಂಬನಿ

ಮೈಸೂರು,ನ.12:- ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ, ಮುತ್ಸದ್ದಿ ರಾಜಕಾರಣಿ, 6 ಬಾರಿಯ ಸಂಸದರಾಗಿದ್ದ, ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನದಿಂದ ಪಕ್ಷಕ್ಕೆ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನಗರ ಬಿಜೆಪಿ ಅಧ್ಯಕ್ಷ  ಡಾ. ಮಂಜುನಾಥ್ ಬಿ ಹೆಚ್ ಕಂಬನಿ ಮಿಡಿದಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ತಾವು ಅನಂತ್  ಕುಮಾರ್ ಅವರ ಜೊತೆ ಇರುವ ಭಾವಚಿತ್ರವನ್ನು ಹಂಚಿಕೊಂಡಿದ್ದಾರೆ.  ಕೇಂದ್ರ ರಸಗೊಬ್ಬರ ಸಚಿವರಾಗಿ ನೀಮ್ ಲೇಪಿತ ಯೂರಿಯಾ ಒದಗಿಸುವ ಮೂಲಕ ಕಾಳ ದಂಧೆಯನ್ನು ತಡೆಗಟ್ಟಿ, ರೈತರಿಗೆ ಅನಿಯಮಿತ ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಂಡಿದ್ದರು. ಅದೇ ರೀತಿ ಜೀವರಕ್ಷಕ ಸ್ಟೆಂಟ್‌ಗಳ‌ ಬೆಲೆ ಇಳಿಸಿ ರೋಗಿಗಳ ಆರೋಗ್ಯ ಸುಧಾರಣೆಗೆ ಕಾರಣರಾಗಿದ್ದರು. ಪ್ರಧಾನಮಂತ್ರಿ ಜನ ಔಷಧ ಕೇಂದ್ರದ ಯಶಸ್ಸಿನ ಹಿಂದೆ ಅನಂತ್ ಕುಮಾರ್ ಅವರ ಪ್ರಯತ್ನವೂ ಇದೆ. ಅವರ ಅಕಾಲಿಕ ನಿಧನ ಅವರ ಕುಟುಂಬಸ್ತರಿಗೆ, ಕ್ಷೇತ್ರದ ಜನತೆಗೆ, ಪಕ್ಷಕ್ಕೆ, ರಾಷ್ಟ್ರಕ್ಕೆ ತುಂಬಲಾರದ ನಷ್ಟ. ಅಗಲಿದ ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: