ಕರ್ನಾಟಕ

ಅನಂತ್ ನಿಧನದಿಂದ ರಾಜಕೀಯ ಕ್ಷೇತ್ರಕ್ಕೆ ನಷ್ಟವಾಗಿದೆ: ಶಾಸಕ ಸುರೇಶ್ ಕುಮಾರ್

ಬೆಂಗಳೂರು (ನ.12): ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನಕ್ಕೆ ಮಲ್ಲೇಶ್ವರ ಶಾಸಕ ಸುರೇಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ಮನಸ್ಸು, ಹೃದಯ ತುಂಬಾ ಭಾರವಾಗಿದೆ. ಪ್ರೀತಿಯ ಸ್ನೇಹಿತ, ಸಹೋದರ, ಅನಂತಕುಮಾರ್ ಇನ್ನಿಲ್ಲವೆಂಬ ಸತ್ಯ ಎಷ್ಟೊಂದು ಕಠೋರ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ನನ್ನ 32 ವರ್ಷದ ರಾಜಕೀಯ ಕ್ಷೇತ್ರದಲ್ಲಿನ ಗೆಳೆಯ ಅನಂತ ಕುಮಾರ್ ಇನ್ನಿಲ್ಲ ಎಂದು ಇದೀಗ ತಿಳಿದು‌ ಈ ಬೆಳಗ್ಗಿನ ಜಾವ ತೀವ್ರ ಆಘಾತವಾಗಿದೆ.‌ ಅನಂತ್ ಇಲ್ಲದ ಬಿಜೆಪಿಯನ್ನು ಊಹಿಸಲಿಕ್ಕೂ ಆಗುವುದಿಲ್ಲ. ಜಯನಗರದ ನಮ್ಮ‌ ವಿಜಯಕುಮಾರ್ ರವರನ್ನು‌ ಕಳೆದುಕೊಂಡ ಕೆಲವೇ ತಿಂಗಳುಗಳಲ್ಲಿ ನಾವು‌ ನಮ್ಮ ಅನಂತ ಕುಮಾರರನ್ನೂ ಕಳೆದುಕೊಂಡಿದ್ದೇವೆ.‌ ಉತ್ತಮ ರಾಜಕೀಯ ಇನ್ನಷ್ಟು ಬಡವಾಗಿದೆ ಎಂದು ನೋವಿನಿಂದ ಬರೆದುಕೊಂಡಿದ್ದಾರೆ.(ಎನ್.ಬಿ)

Leave a Reply

comments

Related Articles

error: