
ಮೈಸೂರು
ಜಿಂಕೆಯ ಚರ್ಮ ಮತ್ತು ಕೊಂಬನ್ನು ಸಂಗ್ರಹಿಸಿದ್ದ ವ್ಯಕ್ತಿಯ ಬಂಧನ
ಮೈಸೂರು,ನ.12:- ಜಿಂಕೆಯ ಚರ್ಮ ಮತ್ತು ಕೊಂಬನ್ನು ಮನೆಯಲ್ಲಿ ಸಂಗ್ರಹಿಸಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ಸರಸ್ವತಿಪುರಂ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುವೆಂಪುನಗರ ಪಡುವಣ ರಸ್ತೆಯಲ್ಲಿರುವ ರೋಹಿತ್ ಎಂಬವರ ಮನೆಯಲ್ಲಿಯೇ ಜಿಂಕೆಯ ಚರ್ಮ ಮತ್ತು ಕೊಂಬು ಸಂಗ್ರಹಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ರೋಹಿತ್ ನನ್ನು ಬಂಧಿಸಿ ಪರವಾನಗಿ ಇಲ್ಲದೇ ಅಕ್ರಮವಾಗಿ ಮಾರಾಟ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಒಂದು ಜಿಂಕೆ ಚರ್ಮ ಹಾಗೂ 2ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ.
ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)