ಮೈಸೂರು

ಸ್ಕೂಟರ್ ಡಿಕ್ಕಿಯಲ್ಲಿದ್ದ ಹಣ ಮೊಬೈಲ್ ಕಳುವು

ಮೈಸೂರು,ನ.12:-ಸ್ಕೂಟರ್ ಡಿಕ್ಕಿಯಲ್ಲಿದ್ದ 75ಸಾವಿರ ರೂ.ನಗದು ಮತ್ತು ನಾಲ್ಕು ಮೊಬೈಲ್ ಫೋನುಗಳನ್ನು ಕಳ್ಳರು ಎಗರಿಸಿದ ಘಟನೆ ಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ ನಲ್ಲಿ ನಡೆದಿದೆ.

ಈ ಕುರಿತು ಡಾ.ವೆಂಕಟೇಶ ಜೋಷಿ ಎಂಬವರು ನಜರ್ ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರು ನ.9ರಂದು ಸ್ಕೂಟರ್ ನಲ್ಲಿ ಕ್ಲಬ್ ಗೆ ಬಂದಿದ್ದು, ತಮ್ಮ ಬಳಿಯಿದ್ದ 75ಸಾವಿರ ರೂ.ನಗದು ಮತ್ತು ನಾಲ್ಕು ಮೊಬೈಲ್ ಗಳನ್ನು ಸ್ಕೂಟರ್ ಡಿಕ್ಕಿಯಲ್ಲಿಟ್ಟು ತೆರಳಿದ್ದರು. ರಾತ್ರಿ 11ರ ಸುಮಾರಿಗೆ ಮರಳಿ ಬಂದು ಸ್ಕೂಟರ್ ಡಿಕ್ಕಿ ತೆರೆದಾಗ ಹಣ ಮತ್ತು ಮೊಬೈಲ್ ಕಳ್ಳತನವಾಗಿರುವುದು ತಿಳಿದು ಬಂದಿದೆ. ಕ್ಲಬ್ ಸಿಸಿಟಿವಿ ಪರಿಶೀಲಿಸಿದಾಗ ಡಾ.ವೆಂಕಟೇಶ್ ಜೋಷಿ ಅವರನ್ನು ಸುಮಾರು 40ರ ಪ್ರಾಯದ ವ್ಯಕ್ತಿಯೋರ್ವ ಹಿಂಬಾಲಿಸಿ ಬಂದು ಹಣದ ಬ್ಯಾಗ್ ಎಗರಿಸಿದ್ದು ಕಂಡು ಬಂದಿದೆ ಎನ್ನಲಾಗಿದ್ದು, ನಜರ್ ಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: