
ಮೈಸೂರು
ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ : ಎಂ.ಕೆ.ಎಸ್ ಸಂತಾಪ
ಮೈಸೂರು,ನ.12 : ಕೇಂದ್ರ ಸಚಿವ ಅನಂತ್ ಕುಮಾರ್ ಅಕಾಲಿಕ ನಿಧನಕ್ಕೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯತೆ, ಸ್ವಸಂಸ್ಕೃತಿಯಲ್ಲಿ ನಂಬಿಕೆ ಇಟ್ಟಿದಂತಹ ಮೇರು ವ್ಯಕ್ತಿತ್ವದ ರಾಜಕಾರಣಿಯಾಗಿದ್ದ ಅವರು, ಅತಿ ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರಮಟ್ಟದ ನಾಯಕರಾಗಿ, ಉತ್ತಮ ಸಂಸದೀಯ ಪಟುವಾಗಿ ಬೆಳೆದಿದ್ದರು. ವಿಶೇಷ ಸಾಮಾನ್ಯ ಜನರ ಪ್ರತಿಧ್ವನಿ ಆಗಿದ್ದ ಅವರು ಕ್ರಿಯಾಶೀಲ ಹಾಗೂ ಸಂಘಟನಾ ಚತುರತೆಯಿಂದಲೇ ಮಾದರಿಯಾಗಿದ್ದರು.
ಸಂಯುಕ್ತ ರಾಷ್ಟ್ರಗಳಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ಮಾತನಾಡಿದ ಕೀರ್ತಿ ಅವರಿಗೆ ಸಲ್ಲಿಸುವದು, ರಾಷ್ಟ್ರನಾಯಕ ಎಲ್.ಕೆ.ಅಡ್ವಾಣಿಯವರು, ವಾಜಪೇಯಿ, ನರೇಂದ್ರಮೋದಿಯವರೊಡನೆ ನಿಕಟವಾದ ಸಂಪರ್ಕ ಹೊಂದಿದ್ದರು.
ಇವರ ಅಗಲಿಕೆ ನೋವು ಕುಟುಂಬಕ್ಕೆ ಭಗವಂತ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಕೋರಿದ್ದಾರೆ. (ಕೆ.ಎಂ.ಆರ್)