ದೇಶ

ಅಗ್ನಿ-4 ಅಣ್ವಸ್ತ್ರ ಖಂಡಾಂತರ ಕ್ಷಿಪಣಿ ಯಶಸ್ವಿ ಪರೀಕ್ಷೆ

ನಾಲ್ಕು ಸಾವಿರ ಕಿಲೋ ಮೀಟರ್ ದೂರದಲ್ಲಿರುವ ಶತ್ರು ನೆಲೆಯನ್ನು ಕ್ಷಣಾರ್ಥದಲ್ಲಿ ಧ್ವಂಸಗೊಳಿಸುವ ಅತ್ಯಾದ್ಭುತ ಸಾಮರ್ಥ್ಯದ ಅಗ್ನಿ-4 ಅಣ್ವಸ್ತ್ರ ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನು ಇಂದು ಭಾರತ ಅತ್ಯಂತ ಯಶಸ್ವಿಯಾಗಿ ನಡೆಸಿ ರಕ್ಷಣ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

ಇಂದು ಬೆಳಿಗ್ಗೆ 11.55ಕ್ಕೆ ಒಡಿಸ್ಸಾದ ಕರಾವಳಿಯ ಡಾ.ಅಬ್ದುಲ್ ಕಲಾಂ ದ್ವೀಪದಲ್ಲಿ ನಡೆದ ಸಮಗ್ರ ಪರೀಕ್ಷೆ ವಲಯ ಉಡಾವಣಾ ಸಂಕೀರ್ಣ -4ದಲ್ಲಿ ಯಶಸ್ವಿಯಾಗಿ ಭೂಮಿಯಿಂದ ನಭಕ್ಕೆ ಚಿಮ್ಮುವ ಅಗ್ನಿ-4 ಕ್ಷಿಪಣಿಯನ್ನು ಮೊಬೈಲ್ ಸಂಚಾರಿ ಉಡಾವಣಾ ವಾಹನದ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು, ಇದರಿಂದ  ಭಾರತ ದೇಶದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಪ್ರಮುಖ ಮುನ್ನೆಜ್ಜೆಯನ್ನು ಇರಿಸಿದೆ.

 

 

 

Leave a Reply

comments

Related Articles

error: